ಬೆಳ್ತಂಗಡಿ, ಮೇ 28 (Daijiworld News/MSP): ಮಾರಾಕಾಸ್ತ್ರಗಳಿಂದ ಕೊಚ್ಚಿ ಸರಕಾರಿ ಐಟಿಐ ಉಪನ್ಯಾಸಕರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಮುಂಡೂರು ಎಂಬಲ್ಲಿ ಮೇ 27 ರ ಸೋಮವಾರ ತಡರಾತ್ರಿ ನಡೆದಿದೆ.
ಹತ್ಯೆಯಾದವರನ್ನು ಮಾಲಾಡಿ ಸರಕಾರಿ ಐಟಿಐ ಉಪನ್ಯಾಸಕ ವಿಕ್ರಂ ಎಂದು ಗುರುತಿಸಲಾಗಿದೆ. ತಮ್ಮ ಮನೆ ಕಡೆಗೆ ತೆರಳುವ ದಾರಿ ಮಧ್ಯೆ ಹತ್ಯೆಯಾದ ಸ್ಥಿತಿಯಲ್ಲಿ ವಿಕ್ರಂ ಅವರ ಮೃತದೇಹ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ಅವರ ಮೃತದೇಹದ ಅಣತ್ ದೂರದಲ್ಲಿ ವಿಕ್ರಂ ಅವರ ಕಾರು ಪತ್ತೆಯಾಗಿದ್ದು, ಅದರಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ಸ್ಥಳಕ್ಕಾಗಮಿಸಿರುವ ಬೆಳ್ತಂಗಡಿ ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.