ಕಾಸರಗೋಡು, ಸೆ.11 (DaijiworldNews/AK):ಅಗತ್ಯ ವಸ್ತುಗಳಿಗೆ ನಿಗಧಿತ ಬೆಲೆಗಿಂತ ದುಬಾರಿ ಬೆಲೆ ಗಳನ್ನು ವಸೂಲಿ ತಡೆಗೆ ಕಂದಾಯ ಇಲಾಖೆ , ನಾಗರಿಕ ಪೂರೈಕೆ ಇಲಾಖೆ ,ಅಳತೆ ಮಾಪಕ ಇಲಾಖೆ ಜಂಟಿಯಾಗಿ ಕಾಸರಗೋಡು ಮಾರುಕಟ್ಟೆಯ 36 ಅಂಗಡಿಗಳಲ್ಲಿ ತಪಾಸಣೆ ನಡೆಸಲಾಯಿತು.
ತಪಾಸಣೆಯಿಂದ 15 ಅಂಗಡಿಗಳಲ್ಲಿ ಅಕ್ರಮ ಕಂಡುಬಂದಿದೆ. ಪರವಾನಿಗೆ ಇಲ್ಲದ ಅಂಗಡಿಗಳಿಗೆ ನೋಟಿಸ್ ನೀಡಲಾಯಿತು. ಬೆಲೆ ಪಟ್ಟಿ ಕಡ್ಡಾಯವಾಗಿ ಪ್ರದರ್ಶಿಸುವಂತೆ ಕಟ್ಟು ನಿಟ್ಟಿನ ನಿರ್ದೇಶನ ನೀಡಲಾಯಿತು.
ದುಬಾರಿ ದರ ವಸೂಲು ಗಮನಕ್ಕೆ ಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮುನ್ನೆಚ್ಚರಿಕೆ ನೀಡಿದರು.ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಪಿ . ನಿಖಿಲ್ , ಜಿಲ್ಲಾ ವಿತರಣಾಧಿಕಾರಿ ಕೆ . ಎನ್ ಬಿಂದು , ತಾಲೂಕು ವಿತರಣಾಧಿಕಾರಿ ಕೃಷ್ಣ ನಾಯ್ಕ್ , ರೇಷನಿಂಗ್ ಇನ್ಸ್ ಫೆಕ್ಟರ್ ದಿಲೀಪ್ , ಲೀಗಲ್ ಮೆಟ್ರೋಲಜಿ ಇನ್ಸ್ ಪೆಕ್ಟರ್ ರಮ್ಯಾ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.