ಮಂಗಳೂರು, ಮೇ 27(Daijiworld News/MSP): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಪರಾಜಯಗೊಂಡ ಮಿಥುನ್ ರೈಗೆ ಕೊಲೆ ಬೆದರಿಕೆ ಹಾಕಿ ಘೋಷಣೆ ಕೂಗುವ ವೀಡಿಯೋ ಒಂದು ವೈರಲ್ ಆಗಿದ್ದು ಇದಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ.
ವೈರಲ್ ಆದ ವಿಡೀಯೋ ಒಂದರಲ್ಲಿ ಓರ್ವ ಘೋಷಣೆ ಕೂಗಿದ್ದು ಆತನ ಜೊತೆಗಿದ್ದ ಇತರರು ಧ್ವನಿಗೂಡಿಸಿದ್ದಾರೆ. ಮಿಥುನ್ ರೈ ಹೆಸರನ್ನು ಹೇಳಿಯೇ ನೇರವಾಗಿ ಬೆದರಿಕೆ ಘೋಷಣೆ ಮಾಡಲಾಗಿದೆ. ವಿಡಿಯೋದಲ್ಲಿ ಘೋಷಣೆ ಕೂಗಿದವರು ಹಿಂದೂ ಸಂಘಟನೆವೊಂದರ ಕಾರ್ಯಕರ್ತರು ಎನ್ನಲಾಗಿದೆ.
ಈ ಪ್ರಕರಣದ ಬಗ್ಗೆ ಪೊಲೀಸ್ ವರಿಷ್ಟಾಧಿಕಾರಿಯಾದ ಬಿ.ಎಂ ಲಕ್ಷ್ಮೀ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದು, ಪ್ರಚೋದನಕಾರಿ ಹೇಳಿಕೆ ನೀಡಿದವರ ವಿರುದ್ದ ಈಗಾಗಲೇ ಕೇಸ್ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದಿದ್ದಾರೆ.