ಮಂಗಳೂರು,ಮೇ 27(Daijiworld News/MSP): ಹೊರರಾಜ್ಯದ ಮಹಿಳೆಯರನ್ನು ಬಳಸಿ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿದ್ದ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕೋಯಿಕ್ಕೋಡ್ ನ ತಳೇರಿಯ ಜುನೈಸ್ , ಸುರತ್ಕಲ್ ನ ಅಬ್ದುಲ್ ನಜೀರ್ ಹಾಗೂ ಎಡಪದವಿನ ನಿಯಾಜ್ ಬಂಧಿತರರು. ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ.
ಶಕ್ತಿನಗರದ ಕ್ರಾಸ್ ಸೌಹರ್ದಲೇನ್ ಬಳಿ ಅಲ್ ಶಮಾಸ್ ಎಂಬ ಹೆಸರಿನ ಬಾಡಿಗೆ ಮನೆಯಲ್ಲಿ ಹೊರರಾಜ್ಯದ ಮಹಿಳೆಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಎಕಾನಾಮಿಕ್ ನಾರ್ಕೋಟಿಕ್ ಕ್ರೈ ಇನ್ ಸ್ಪೆಕ್ಟರ್ ರಾಮಕೃಷ್ಣ ಕೆ.ಕೆ ಅವರಿಗೆ ಬಂದ ಖಚಿತ ಮಾಹಿತಿಯಂತೆ ಶನಿವಾರ ಮನೆಗೆ ದಾಳಿ ನಡೇಸಿದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ ಲಕ್ಷ್ಮೀ ಗಣೇಶ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.