ಬಂಟ್ವಾಳ , ಸೆ.05 (DaijiworldNews/AK): ಕುಮ್ಡೇಲು ಶ್ರೀ ನಾಗಬ್ರಹ್ಮ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ಕೋರ್ದಬ್ಬು ಶಿಲಾಮಯ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮವು ಗುರುವಾರ ನಡೆಯಿತು.
ಮಾಜಿ ಸಚಿವ ಬಿ.ರಮನಾಥ ರೈ ಯವರು ಸಭಾ ಕಾರ್ಯಕ್ರಮವನ್ನು ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಅವಿಭಜಿತ ದ.ಕ.ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಬೇರೆ ಯಾವ ಜಿಲ್ಲೆಯಲ್ಲಿಯೂ ನಡೆಯಲು ಸಾಧ್ಯವಿಲ್ಲ. ಇಲ್ಲಿನ ನೆಲದ ಸಂಸ್ಕೃತಿಯೇ ವಿಶಿಷ್ಟವಾದುದು ಎಂದರು.
ಮಾಜಿ ಸಂಸದ ನಳಿನ್ಕುಮಾರ್ ಕಟೀಲ್ ಮಾತನಾಡಿ,ಮಾನವರಲ್ಲಿಯೂ ದೇವರನ್ನು ಕಲ್ಲಿನಲ್ಲೂ ದೇವರನ್ನು ಕಂಡ ಕೃಷಿ ಆರಾಧನೆಯ ಜಿಲ್ಲೆ ನಮ್ಮದಾಗಿದ್ದು, ದೈವಗಳ ಶಕ್ತಿಯನ್ನುಇಡೀ ನಾಡಿಗೆ ಪರಿಚಯಿಸಿದ ಕೀರ್ತಿ ನಮ್ಮ ತುಳುನಾಡಿನದ್ದು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಕಟ್ಟಡ ನಿರ್ಮಾಣ ಗುತ್ತಿಗೆದಾರರಾದ ಡಾ.ಸಂಜೀವ ದಂಡಕೇರಿ, ನೆತ್ತರಕೆರೆಗುತ್ತು ನಾರಾಯಣ ಹೊಳ್ಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬಾಲಕೃಷ್ಣ, ಪ್ರಮುಖರಾದ ಶಿವಪ್ಪ ನಂತೂರು, ಉದ್ಯಮಿಗಳಾದ ರಾಜಶೇಖರ ಚೌಟ, ಕೆಪಿ ಶೆಟ್ಟಿ , ಭುವನೇಶ್ ಪಚ್ಚಿನಡ್ಕ, ಸೇವಾಂಜಲಿ ಟ್ರಸ್ಟ್ ನ ಕೆ.ಕೃಷ್ಣಕುಮಾರ್ ಪೂಂಜಾ, ತುಂಬೆಗುತ್ತು ಚಂದ್ರಪ್ರಕಾಶ್ ಶೆಟ್ಟಿ, ನಿರ್ಮಾಣ ಸಮಿತಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಬೆಂಜನಪದವು, ಆಡಳಿತ ಮೊಕ್ತೇಸರರಾದ ಭಾಸ್ಕರ ಚೌಟ, ಭರತ್ ಕುಮ್ಡೇಲು, ಮನೋಜ್ಆಚಾರ್ಯ, ರವೀಂದ್ರ ಕಂಬಳಿ, ದಾಮೋದರ ನೆತ್ರಕೆರೆ, ಜಗನ್ನಾಥ ಚೌಟ, ಉಮೇಶ್ ಶೆಟ್ಟಿಬರ್ಕೆ, ಗಣೇಶ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ರಾಜೇಶ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು. ಹರಿಕೃಷ್ಣ ಕೆ.ಪಂಡಿತ್ ವಂದಿಸಿದರು.