ಉಡುಪಿ, ಸೆ.04 (DaijiworldNews/AK): ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರ ಕಛೇರಿ, ಮಣಿಪಾಲ ಇವರು ಉಡುಪಿ ಜಿಲ್ಲಾ ಶಾಲಾ ಮಟ್ಟದಲ್ಲಿ ಶೈಕ್ಷಣಿಕ ವರ್ಷ 2024-2025ರ 5 ಕಿರಿಯ ಪ್ರಾಥಮಿಕ, ಒಂದು ಹಿರಿಯ ಪ್ರಾಥಮಿಕ, 5 ಪ್ರೌಢಶಾಲಾ ವಿಭಾಗ ಮತ್ತು 6 ಮಂದಿ ಪ್ರಾಂಶುಪಾಲ “ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ” ಪುರಸ್ಕೃತರನ್ನು ಪ್ರಕಟಿಸಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಕಾರ್ಕಳ ಸರಕಾರಿ ಪ್ರೌಢಶಾಲೆಯ ಶಿವಪುರದ ಕಲಾಶಿಕ್ಷಕ ಕಮಲ್ ಅಹಮ್ಮದ್, ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ಮಂಜುನಾಥ ಶೆಟ್ಟಿ (ಪ್ರೌಢಶಾಲಾ ವಿಭಾಗ) ಉಪ್ಪುಂದ ಬೈಂದೂರು, ಜ್ಯೋತಿ ಕೃಷ್ಣ ಪೂಜಾರಿ ಸಹಶಿಕ್ಷಕಿ ಸೋಮಬಂಗೇರ ಸರಕಾರಿ ಪ್ರೌಢಶಾಲೆ ಕೋಡಿಕನ್ಯಾ ಬ್ರಹ್ಮಾವರ, ಮಾಲತಿ ವಕ್ವಾಡಿ ಸಹಶಿಕ್ಷಕಿ. ಮಲ್ಪೆಯ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ) ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಭಾಸ್ಕರ ಪೂಜಾರಿ, ಸಹಶಿಕ್ಷಕ ಕೆ.ಪಿ.ಎಸ್.ಕೊಕ್ಕರ್ಣೆ ಬ್ರಹ್ಮಾವರ ಹಾಗೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಖತುನ್ ಬಿ ಸಹಶಿಕ್ಷಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾರ್ ಉರ್ದು ಉಡುಪಿ, ರವಿರಾಜ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಕಾಡಿ ಬ್ರಹ್ಮಾವರ. ಶ್ರೀನಿವಾಸ ಶೆಟ್ಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಪಾಡಿ ಪಡು ಕುಂದಾಪುರದ ಸಹಶಿಕ್ಷಕ ಹಾಗೂ ಬಾರಂದಾಡಿ ಬೈಂದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಮಿತಾ ಬಿ ಸಹಶಿಕ್ಷಕಿ.
ಕೆಪಿಎಸ್ ಬಿದ್ಕಲಕಟ್ಟೆ ಕುಂದಾಪುರದ ಪ್ರಾಂಶುಪಾಲ ಕರುಣಾಕರ ಶೆಟ್ಟಿ, ಸಾಂತೂರುಕೊಪ್ಲ ಉಡುಪಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ರಾಮಕೃಷ್ಣ ಭಟ್, ಕೈರಬೆಟ್ಟು ಕಾರ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೆಟ್ಟಿ ಶಶಿಕಲಾ ನಾರಾಯಣ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಜಯಾನಂದ ಪಟಗಾರ ಹೆರಂಜಾಲು ಬೈಂದೂರು, ಸೀತಾರಾಮ ಶೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾದ ಡಾ| ಹಗ್ಲೂರು ಕುಂದಾಪುರ, ಹಾಗೂ ಕಾರ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಚ್ಚೂರು-2 ಇದರ ಪ್ರಾಂಶುಪಾಲರಾದ ಮಾಲಿನಿ ಸನ್ಮಾನ ಸ್ವೀಕರಿಸಲಿದ್ದಾರೆ.