ಮಂಗಳೂರು, ಮೇ26(Daijiworld News/SS): ಇಲ್ಲಿನ ಬೀಚ್ನಲ್ಲಿ ಹಡಗುಗಳಿಂದ ತ್ಯಜಿಸಲ್ಪಟ್ಟ ತೈಲ ಜಿಡ್ಡು ರಾಶಿ ತೀರ ಸೇರಿದ್ದು, ಪಣಂಬೂರು ಕಡಲ ಕಿನಾರೆ ವಿರೂಪಗೊಂಡಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಅಂತಾರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಸಾಗುವ ಬೃಹತ್ ಹಡಗುಗಳು ತ್ಯಾಜ್ಯವನ್ನು ಸಂಸ್ಕರಿಸದೆ ನೇರವಾಗಿ ಸಮುದ್ರಕ್ಕೆ ಬಿಡುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಇದುವರೆಗೂ ಸಂಬಂಧಪಟ್ಟ ಇಲಾಖೆಗಳು ಗಂಭೀರ ಕ್ರಮವನ್ನು ಕೈಗೊಂಡಿಲ್ಲ ಎನ್ನಲಾಗುತ್ತಿದೆ.
ಆಳ ಸಮುದ್ರದಲ್ಲಿ ಕಚ್ಚಾ ತೈಲ ಸಾಗಾಟದ ವೇಳೆ ಹಡಗನ್ನು ಬಲಾಸ್ಟಿಂಗ್ ಸಿಸ್ಟಮ್ ಮೂಲಕ ನಿಯಂತ್ರಿಸುವಾಗ ಕಚ್ಚಾ ತೈಲ ಸೋರಿಕೆ ಆಗುತ್ತದೆ. ಮಾತ್ರವಲ್ಲ ಹೆಚ್ಚುವರಿ ತೈಲದ ತ್ಯಾಜ್ಯವನ್ನು ಬಂದರುಗಳಲ್ಲಿ ಸಂಸ್ಕರಣೆಗೆ ನೀಡಬೇಕು ಎಂಬುದು ನಿಯಮ. ಆದರೆ ಆಳ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಸಂಚರಿಸುವ ಟ್ಯಾಂಕರ್ಗಳು ಸಮುದ್ರದಲ್ಲೇ ವಿಸರ್ಜಿಸುತ್ತವೆ. ಇದು ಸಮುದ್ರದ ಉಬ್ಬರ ಇಳಿತಕ್ಕೆ ಟಾರ್ಗಳಾಗಿ ಮಾರ್ಪಟ್ಟು ಸಮುದ್ರ ತೀರ ಸೇರುತ್ತವೆ
ಕಳೆದ ಎಪ್ರಿಲ್ ತಿಂಗಳಲ್ಲಿ ಇದೇ ರೀತಿ ಜಿಡ್ಡಿನ ಉಂಡೆಗಳು ಪಣಂಬೂರು, ತಣ್ಣೀರುಬಾವಿ ಬೀಚ್ಗಳಲ್ಲಿ ಕಾಣಿಸಿಕೊಂಡಿದ್ದವು.