ಕಾಸರಗೋಡು, ಸೆ.03 (DaijiworldNews/ AK): ಎ ಟಿಎಂ ಗೆ ಹಣ ತುಂಬಿಸಲು ತಂದಿದ್ದ ವಾಹನದಿಂದ 50 ಲಕ್ಷ ರೂ . ದರೋಡೆಗೈದ ಪ್ರಕರಣ ಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ತಿರುಟ್ಟಿ ಗ್ರಾಮದ ಮುತ್ತು ಕುಮಾರನ್ (47) ಬಂಧಿತ ಆರೋಪಿ. ಮೇ 27 ರಂದು ಘಟನೆ ನಡೆದಿತ್ತು. ಉಪ್ಪಳದ ಎಕ್ಸ್ಸ್ ಬ್ಯಾಂಕ್ ನ ಎಟಿಎಂ ಗೆ ಹಣ ತುಂಬಿಸಲು ಬಂದಿದ್ದ ಸಂದರ್ಭದಲ್ಲಿ ವ್ಯಾನ್ ನಿಂದ ಹಣ ದರೋಡೆ ಮಾಡಲಾಗಿತ್ತು.
ಮೇ 27 ರಂದು ಹಾಡ ಹಗಲೇ ಘಟನೆ ನಡೆದಿತ್ತು.ವಿಶೇಷ ಪೊಲೀಸ್ ತಂಡ ತಿರುಚ್ಚಿರಾಪಳ್ಳಿ ಯಿಂದ ಆರೋಪಿ ಯ ಬಂಧಿಸಿದರು. ಮೂವರ ತಂಡ ಕೃತ್ಯ ನಡೆಸಿತ್ತು