ಮಂಗಳೂರು, ಸೆ.03 (DaijiworldNews/AK): ನಾನು ಯಾವ ರೇಸ್ನಲ್ಲೂ ಇಲ್ಲ. ನಾನು ರೇಸ್ನಲ್ಲಿ ಓಡುವ ಕುದುರೆಯೂ ಅಲ್ಲ, ಕತ್ತೆನೂ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಸುದ್ದಿಗಾರರಮಾತನಾಡಿದ ಅವರು, ಮುಖ್ಯಮಂ ತ್ರಿ ಹುದ್ದೆಯ ಆಕಾಂಕ್ಷಿಯೇ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅವಕಾಶ ನೀಡಿದ ಕುರಿತು ಕಾನೂನು ಹೋರಾಟ ನಡೆಯುತ್ತಿದೆ.ಇದೇ 9ರಂದು ಇದಕ್ಕೆ ಸಂಬಂಧಿಸಿ ವಿಚಾರಣೆ ನಿಗದಿಯಾಗಿದೆ. ಬಳಿಕ ಈ ಬಗ್ಗೆ ಯೋಚನೆ ಮಾಡೋ ಣ. ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಯೂ ಆಗುತ್ತಿದೆ. ಆ ತೀರ್ಮಾನ ಬರುವವರಗೆ ಹೇಳಿಕೆ ನೀಡುವುದು ತಪ್ಪಾಗುತ್ತದೆ ಎಂದರು.
ಮುಖ್ಯಮಂ ತ್ರಿ ಹುದ್ದೆ ಕುರಿತು ಪಕ್ಷದ ನಾಯಕರು ಹೇಳಿಕೆ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಮಾಧ್ಯಮದವರು ಪ್ರಶ್ನೆ ಕೇಳಿದಾಗ ನಾಯಕರು ಉತ್ತರ ನೀಡುತ್ತಾರೆ. ಅದಕ್ಕೆ ಏನೂ ಮಾಡೋದಕ್ಕೆ ಸಾಧ್ಯವಿಲ್ಲ, ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ತೀರ್ಮಾನ ಮಾಡುತ್ತದೆ ಎಂದರು.
ಕೋವಿಡ್ ಸಮಯದ ಹಗರಣದ ಕುರಿತ ತನಿಖಾ ವರದಿ ಸಲ್ಲಿಕೆ ಆಗಿರುವ ಕುರಿತು ಪ್ರತಿಕ್ರಿಯಸಿದ ಅವರು, ಕೋವಿಡ್ ಸಂದರ್ಭ ದಲ್ಲಿ ಡಾ. ಸುಧಾಕರ್ ಆರೋಗ್ಯ ಮಂತ್ರಿ ಆಗಿದ್ದರು. ಕೋವಿಡ್ನಿಂದ 4 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ ಕೋವಿಡ್ ಲಸಿಕೆ ನೀಡುವುದರಲ್ಲಿ ಏನೆಲ್ಲ ಅವ್ಯವಸ್ಥೆ ಆಗಿದೆ ಎಂಬುದನ್ನು ನೋಡಿದ್ದೇವೆ. ಈ ಕುರಿತ ತನಿಖಾ ವರದಿ ಹೊರಗಡೆ ಬರಲಿ. ತಪ್ಪು ಮಾಡಿದ್ದರೆ, ಅದಕ್ಕೆ ಶಿಕ್ಷೆ ಅನುಭವಿಸಲು ಅವರು ಸಿದ್ಧವಾಗಬೇಕು ಎಂದು ಹೇಳಿದರು.