ಸುಳ್ಯ, ಸೆ.3(DaijiworldNews/AA): ಅಜ್ಜಾವರ ಗ್ರಾಮದ ಕಾಂತಮಂಗಲ ಸೇತುವೆಯಿಂದ ನದಿಗೆ ಹಾರಿದ್ದ ಯುವಕನ ಮೃತದೇಹ ಇಂದು ಪತ್ತೆಯಾಗಿದೆ.
ಅಡ್ಕ ನಿವಾಸಿ ಸಿನಾನ್(30) ಸೆ.2 ರಂದು ಹೊಳೆಗೆ ಹಾರಿದ್ದರು. ಇದೀಗ ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಸಿನಾನ್ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗುತ್ತಿದ್ದು, ಈ ಹಿಂದೆಯೂ ಆತ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಸೋಮವಾರ ಸುಳ್ಯಕ್ಕೆ ತೆರಳಿದ್ದ ಈತ ಮನೆಗೆ ಮರುಳುವ ಸಂದರ್ಭದಲ್ಲಿ ಕಾಂತಮಂಗಲ ಸೇತುವೆಯಿಂದ ನದಿಗೆ ಹಾರಿದ್ದಾನೆ ಎನ್ನಲಾಗಿದೆ.
ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.