ಬಂಟ್ವಾಳ, ಸೆ.02 (DaijiworldNews/AK): ವಿಟ್ಲ ಪಟ್ಟಣ ಪಂಚಾಯತಿಯ ಮುಂದಿನ ಎರಡೂ ವರೆ ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿಯ ಕರುಣಾಕರ ಗೌಡ ನಾಯ್ತೊಟ್ಟು ಮತ್ತು ಉಪಾಧ್ಯಕ್ಷರಾಗಿ ಬಿಜೆಪಿಯ. ಸಂಗೀತಾ ಪಾಣೆಮಜಲು ಬಹುಮತ ಪಡೆದು ಆಯ್ಕೆ ಆಗಿದ್ದಾರೆ.
18 ಸದಸ್ಯ ಬಲದ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ 12, ಕಾಂಗ್ರೆಸ್ ಐದು ಹಾಗೂ ಓರ್ವ ಎಸ್ ಡಿ ಪಿ ಐ ಸದಸ್ಯರಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಕರುಣಾಕರ ಗೌಡ ಮಾತ್ರ ನಾಮಪತ್ರ ಸಲ್ಲಿಸಿದ್ದರು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸಂಗೀತಾ ಪಾಣೆಮಜಲು ಮತ್ತು ಕಾಂಗ್ರೆಸ್ ನ ಪದ್ಮಿನಿ ನಾಮಪತ್ರ ಸಲ್ಲಿಸಿದ್ದರು. ಸಂಸದ ಬಿಜೇಶ್ ಚೌಟರ ಮತ ಸೇರಿದಂತೆ ಬಿಜೆಪಿ ಅಭ್ಯರ್ಥಿ 13 ಮತ ಗಳಿಸಿ ಜಯಗಳಿಸಿದರೆ,ಕಾಂಗ್ರೆಸ್ ಅಭ್ಯರ್ಥಿ ಎಸ್ ಡಿ ಪಿ ಐ ಯ ಒಂದು ಮತ ಸೇರಿದಂತೆ ಆರು ಮತ ಗಳಿಸಿದರು. ವಿಳಂಬವಾಗಿ ಬಂದ ಶಾಸಕರು ಮತ ಚಲಾಯಿಸಲಿಲ್ಲ.ತಹಶಿಲ್ದಾರ್ ಅರ್ಚನಾ ಭಟ್,ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಗೋಪಾಲ ನಾಯ್ಕ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಂಸದ ಬೃಜೇಶ್ ಚೌಟ, ಶಾಸಕ, ಅಶೋಕ್ ರೈ, ಮಾಜಿ ಶಾಸಕ ಸಂಜೀವ ಮಟಂದೂರು,ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಉಪಾಧ್ಯಕ್ಷ ಪುನೀತ್ ಮಾಡತ್ತಾರು, ವಿಟ್ಲ ಶಕ್ತಿಕೇಂದ್ರದ ಅಧ್ಯಕ್ಷ ಉದಯ್, ಮಾಜಿ ಅಧ್ಯಕ್ಷ ಅರುಣ್ ವಿಟ್ಲ, ಮುಖಂಡರಾದ ಜಗನ್ನಾಥ ಸಾಲಿಯಾನ್, ಸಾಜ ರಾಧಾಕೃಷ್ಣ ಆಳ್ವ, ಚನಿಲ ತಿಮ್ಮಪ್ಪ ಶೆಟ್ಟಿ, ಪ್ರೇಮಾನಂದ ನರಸಪ್ಪ ಪೂಜಾರಿ, ಜಯಂತ್ , ರವಿಪ್ರಕಾಶ್ ಹರೀಶ್, ಕಾಂಗ್ರೆಸ್ ಮುಖಂಡರಾದ ಎಂ.ಎಸ್ ಮಹಮ್ನದ್ ಮುರಳೀದರ ರೈ ಮಠಂತಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಪಟ್ಟಣ ಪಂಚಾಯತಿ ಅಭಿವೃದ್ಧಿಗೆ ಆದ್ಯತೆ:
ಪಟ್ಟಣ ಪಂಚಾಯತಿ ಅಭಿವೃದ್ಧಿಗೆ ಕಟಿಬದ್ದರಾಗಿದ್ದೇವೆ. ಪಕ್ಷದ ವರಿಷ್ಠರ ಮಾರ್ಗದರ್ಶನದಲ್ಲಿ ರಾಜ್ಯ ಮತ್ತು ಕೇಂದ್ರದ ಅನುದಾನ ಪಡೆದು ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಅಧ್ಯಕ್ಷ, ಉಪಾಧ್ಯಕ್ಷರು ತಿಳಿಸಿದ್ದಾರೆ.
ಎರಡು ವರ್ಷ ಎಂಟು ತಿಂಗಳ ಬಳಿಕ
2021ರ ಡಿ. 27 ರಂದು ಪಟ್ಟಣ ಪಂಚಾಯತಿ ಚುನಾವಣೆ ನಡೆದು ಸದಸ್ಯರ ಆಯ್ಕೆ ನಡೆದಿತ್ತು ಅಧ್ಯಕ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಸಮಸ್ಯೆ ನ್ಯಾಯಾಲಯದಲ್ಲಿ ಇದ್ದ ಕಾರಣ ಆಯ್ಕೆ ಪ್ರಕ್ರಿಯೆ ವಿಳಂಬ ಆಗಿತ್ತು. ಇದೀಗ ಎರಡು ವರ್ಷ ಎಂಟು ತಿಂಗಳ ಬಳಿಕ ಪಟ್ಟಣ ಪಂಚಾಯತಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿದೆ