ಕುಂದಾಪುರ, ಸೆ.1(DaijiworldNews/AA): ಮನೆಯಲ್ಲಿ ಸೂಟ್ಕೇಸ್ನಲ್ಲಿ ಇರಿಸಲಾಗಿದ್ದ 100 ಗ್ರಾಂ ತೂಕದ 4.8 ಲಕ್ಷ ಮೌಲ್ಯದ ಮೂರು ಚಿನ್ನದ ಬಳೆಗಳು ಕಳ್ಳತನವಾದ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರ ನಿವಾಸಿ ಮರಿಯಮ್ ಶಹರಿನ್ (26) ಅವರು ಈ ಕುರಿತು ದೂರು ದಾಖಲಿಸಿದ್ದಾರೆ. ಆಗಸ್ಟ್ 22 ರಂದು ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆಯ ಕಲ್ಕಂಬದಲ್ಲಿರುವ ತನ್ನ ಮಾವ ಮಹಮ್ಮದ್ ಖಾಸಿಂ ಅವರ ಮನೆಗೆ ಗೃಹಪ್ರವೇಶ ಮತ್ತು ಮದುವೆಗೆಂದು ತೆರಳಿದ್ದರು. ಆಗಸ್ಟ್ 26 ರ ಸಂಜೆ ಮನೆಗೆ ಹಿಂದಿರುಗಿದ ಅವರು ನಂತರ ಮೂರು ಬಳೆಗಳು ಮತ್ತು ಇತರ ಚಿನ್ನಾಭರಣಗಳನ್ನು ಬಟ್ಟೆಗಳೊಂದಿಗೆ ಸೂಟ್ಕೇಸ್ನಲ್ಲಿ ಇರಿಸಿದ್ದಳು. ಆದರೆ, ಆಗಸ್ಟ್ 27ರ ಸಂಜೆ ಸೂಟ್ಕೇಸ್ ತೆರೆದಾಗ ಚಿನ್ನಾಭರಣಗಳು ನಾಪತ್ತೆಯಾಗಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.