ಮಂಗಳೂರು, ಸೆ.01 (DaijiworldNews/TA):ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯ ರೋಹನ್ ಕಾರ್ಪೊರೇಶನ್ ಎದುರಿನ ಮೆರಿಡಿಯನ್ ಗುರು ಪ್ಲಾಝಾ ಕಟ್ಟಡದಲ್ಲಿ 'ನಿಸರ್ಗ ಫ್ರೆಶ್ ' ಮರದ ಗಾಣದ ಎಣ್ಣೆ ಮಿಲ್ (ಕೋಲ್ಡ್ ಪ್ರೆಸ್ಡ್ ಆಯಿಲ್) ಫ್ಯಾಕ್ಟರಿ ಮಳಿಗೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಆರೋಗ್ಯಕ್ಕೆ ಶುದ್ಧ ಎಣ್ಣೆ ಅಗತ್ಯ. ಆದರೆ ಇಂದು ಕಲಬೆರಕೆ ಎಣ್ಣೆಯಿಂದಾಗಿ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಇಂಥಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಉಡುಪಿಯಲ್ಲಿ ಮರದ ಗಾಣದ ಮಿಲ್ ಮೂಲಕ ವಿವಿಧ ಬಗೆಯ ಪರಿಶುದ್ಧ ಎಣ್ಣೆಯನ್ನು ಮಾರುಕಟ್ಟೆಗೆ ಒದಗಿಸಿ ಖ್ಯಾತಿ ಗಳಿಸಿರುವ ನಿಸರ್ಗ ಫ್ರೆಶ್ ಸಂಸ್ಥೆಯ ಮಳಿಗೆ ಮಂಗಳೂರಿನಲ್ಲೂ ಆರಂಭವಾಗುತ್ತಿರುವುದು ಶ್ಲಾಘನೀಯ. ಇದು ಮಂಗಳೂರು ಜನತೆಯ ಆರೋಗ್ಯದ ದೃಷ್ಟಿಯಿಂದಲೂ ದೊಡ್ಡ ಕೊಡುಗೆ ತುಳುನಾಡಿನವರಿಗೆ ತೆಂಗಿನೆಣ್ಣೆ ಬಳಕೆ ಹೆಚ್ಚು ಅದು ಆರೋಗ್ಯಕ್ಕೂಪೂರಕ ಆದರೆ ಅದುಶುದ್ಧವಾಗಿರಬೇಕು. ಇತ್ತೀಚೆಗೆ ಹೊಟೇಲ್ಗಳು ಕೂಡ ಶುದ್ದ ತೆಂಗಿನ ಎಣ್ಣೆಯನ್ನೇ ಬಳಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಕಾಮತ್ ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ದಾಯ್ದಿ ವರ್ಲ್ಡ್ ಮೀಡಿಯಾ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ, ಗುಣಮಟ್ಟದಿಂದಾಗಿ 5 ವರ್ಷಗಳಲ್ಲಿ ನಿಸರ್ಗ ಫ್ರೆಶ್ ಸಂಸ್ಥೆ ಗಮನಾರ್ಹವಾಗಿ ಬೆಳೆದು ಹಲವಾರು ಮಂದಿಗೆ ಉದ್ಯೋಗವನ್ನೂ ನೀಡಿದೆ. ಆರೋಗ್ಯಕ್ಕಾಗಿ ಪರಿಶುದ್ಧವಾದ ಎಣ್ಣೆಗಳನ್ನು ನೇರವಾಗಿ ಒದಗಿಸುತ್ತಿರುವುದು ಶ್ಲಾಘನೀಯ ಎಂದರು.
ಎಣ್ಣೆ ಸೂರ್ಯಕಾಂತಿ ಎಣ್ಣೆ ಕಹಿಬೇವಿನ ಎಣ್ಣೆ ಲಭ್ಯವಿದೆ. ಕಲಬೆರಕೆ ಎಣ್ಣೆಗಳಿಂದ ಸಾರ್ವಜನಿಕರ ಆರೋಗ್ಯಕ್ಕೆ ಸಮಸ್ಯೆಯಾಗುತ್ತಿದೆ. ಹಾಗಾಗಿ ಸಂಸ್ಥೆ ಪರಿಶುದ್ಧವಾದ ಮರದ ಗಾಣದ ಎಣ್ಣೆಯನ್ನೇ ಮಾರುಕಟ್ಟೆ ಒದಗಿಸುತ್ತಿರುವುದರಿಂದ ಗ್ರಾಹಕರ ವಿಶ್ವಾಸ ಗಳಿಸಲು ಸಾಧ್ಯವಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದರು.
ಉದ್ಯಮಿ ಶ್ರೀಕರ ಪ್ರಭು, ಸಂಸ್ಥೆಯ ಮಾಲಕ ಪುನೀತ್ ಸೋಮಯ್ಯ ಪೂಜಾರಿ, ಉಮೇಶ್ ಪೂಜಾರಿ, ಸತೀಶ್ ಸಾಲ್ಯಾನ್, ಕಾರ್ಪೊರೇಷನ್ ಬ್ಯಾಂಕಿನ ನಿವೃತ್ತ ಅಧಿಕಾರಿ ಸಂಧ್ಯಾ ಬೊಳ್ವಾರ್, ಕಟಪಾಡಿ ನಾರಾಯಣ ಪೂಜಾರಿ, ರಘುನಾಥ್ ಮಾಲಿಯಾನ್, ರಾಮಚಂದ್ರ ಮಾಬಿಯಾನ್, ಜನಾರ್ದನ ಪೂಜಾರಿ, ಪ್ರಶಾಂತ್ ಪೂಜಾರಿ, ರಾಕೇಶ್ ಪೂಜಾರಿ ಉಪಸ್ಥಿತರಿದ್ದರು. ಜ್ಞಾನೇಶ್ ಸುವರ್ಣ ಪೂಜಾರಿ, ಸತೀಶ್ ಸಾಲ್ಯಾನ್, ದೀಪಾ ಪುನೀತ್ ಕಾರ್ಯಕ್ರಮ ನಿರ್ವಹಿಸಿದರು.
ನಿಸರ್ಗ ಫ್ರೆಶ್'ನಲ್ಲಿ ಮರದ ಗಾಣದ ಎಣ್ಣೆ ಮಿಲ್ನಿಂದ ತಯಾರಿಸಲಾದ ಶುದ್ಧ ಕೊಬ್ಬರಿ ಎಣ್ಣೆ ಎಳ್ಳೆಣ್ಣೆ ನೆಲಗಡಲೆ ಎಣ್ಣೆ ಕುಸುಬಿ ಎಣ್ಣೆ ಅಗಸೆಬೀಜ ಎಣ್ಣೆ ಹುಚ್ಚೆಳ್ಳು ಎಣ್ಣೆ ಹರಳೆಣ್ಣೆ ಸಾಸಿವೆ ಎಣ್ಣೆ ದೊರೆಯುತ್ತದೆ.