ಕಾರ್ಕಳ, ಆ.30(DaijiworldNews/AA): ನಗರದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಹೆಚ್ಚಿನ ರೀತಿಯ ಅನುದಾನಗಳನ್ನು ಬಿಡುಗಡೆಗೆ ಸಂಸದರ ಸಹಕಾರದೊಂದಿಗೆ ಮುಂದಾಗುತ್ತೇನೆ. ಅಭಿವೃದ್ಧಿಯ ಸತ್ಕಾರ್ಯಗಳಲ್ಲಿ ಆಡಳಿತ, ಪ್ರತಿಪಕ್ಷ ಎಂಬ ತಾರತಮ್ಯೆ ಸಲ್ಲದು ಎಂದು ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.
ಕಾರ್ಕಳ ಪುರಸಭೆಯಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯ ಬಳಿಕ ನಡೆಸ ಅಭಿನಂದನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರದೀಪ್ ಕೋಟ್ಯಾನ್ ಅವರು ಈ ಹಿಂದೆ ಕಾರ್ಕಳ ಪುರಸಭೆಯ ಅಧ್ಯಕ್ಷರಾಗಿದ್ದರು. ಅವರು ಸಹೋದರ ಇದೀಗ ಇದೇ ಪುರಸಭೆಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಅವರಿಬ್ಬರು ನನ್ನ ಸಹೋದರ ಮಾವಂದಿರು. ಏನಿದ್ರೂ ಅದು ರಾಜಕೀಯ ಮನೆ. ನಾವೆಲ್ಲರೂ ಒಂದೇ ಮನೆಯಿಂದ ಬಂದವರು ಎಂದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಮೂಲ ಸೌಕರ್ಯದ ವಿಚಾರದಲ್ಲಿ ರಾಜಕೀಯ ಸಲ್ಲದು. ಪ್ರತಿಪಕ್ಷದವರ ಸಹಕಾರದೊಂದಿಗೆ ಕೈಜೋಡಿಸಿದಾಗ ಅಭಿವೃದ್ಧಿಗೆ ಪೂರಕವಾಗುತ್ತದೆ. ಅದೇ ರೀತಿಯಲ್ಲಿ ಪ್ರತಿಪಕ್ಷ ಸದಸ್ಯರುಗಳ ಸಹಕಾರವನ್ನು ಕೋರಿದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಇವರಿಗೆ ಸಂಸದ ಹಾಗೂ ಶಾಸಕರು ಶಾಲು ಹೊದಿಸಿ ಹೂಮಾಲೆ ಹಾಕಿ ಶುಭಾ ಹಾರೈಸಿದರು.
ಪಕ್ಷೇತರ ಅಭ್ಯರ್ಥಿ ಗೈರುಹಾಜರಿ
ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಶುಭದರಾವ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಿನ್ನಿ ಬೋಲ್ಡ್ ಮೆಂಡೋನ್ಸಾ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಶಾಂತ್ ಕೋಟ್ಯಾನ್ ನಾಮಪತ್ರ ಸಲ್ಲಿಸಿದ್ದರು.
23 ಸದಸ್ಯರು ಹೊಂದಿರುವ ಕಾರ್ಕಳ ಪುರಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಹೊಂದಿದೆ. ಓರ್ವ ಪಕ್ಷೇತರ ಅಭ್ಯರ್ಥಿ ಚುನಾವಣೆಯಲ್ಲಿ ಗೈರುಹಾಜರಿಯಾಗಿದ್ದರು. ಶಾಸಕ ಹಾಗೂ ಸಂಸದರು ಬಿಜೆಪಿಯ ಪರ ಮತ ಚಲಾಯಿಸಿರುವುದರಿಂದ ಯೋಗೀಶ್ ಕೊಟ್ಯಾನ್ ಹಾಗೂ ಪ್ರಶಾಂತ್ ಕೋಟ್ಯಾನ್ ಅವರಿಗೆ 13 ಮತಗಳು ಲಭಿಸುವ ಮೂಲಕ ಕಾರ್ಕಳ ಪುರಸಭೆ ಮತ್ತೊಮ್ಮೆ ಬಿಜೆಪಿಯ ಪಾಲಾಗಿದೆ.