ಉಡುಪಿ, ಆ.30(DaijiworldNews/TA): ಬಿಕಿನಿ ತೊಟ್ಟುಕೊಂಡು ಫೊಟೋ ಶೂಟ್ ಮಾಡಲು ಹೋದ ಯುವತಿಗೆ ಪೊಲೀಸರು ಬ್ರೇಕ್ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವತಿ ಇದೊಂದು ದೊಡ್ಡ ಅಪರಾಧ ಎಂಬ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮುಂಬೈನಿಂದ ಪಡುಬಿದ್ರೆ ಬೀಚ್ಗೆ ಖ್ಯಾತಿ ಶ್ರೀ ಎಂಬ ಮಾಡೆಲ್ ಬಿಕಿನಿ ಫೊಟೊಶೂಟ್ಗೆ ಬಂದಿದ್ದಾಳೆ. ತನ್ನ ಪತಿಯ ಜೊತೆ ಬಂದಿದ್ದ ಈಕೆ ಬೀಚ್ ಬಳಿ ಬಿಕಿನಿ ತೊಟ್ಟುಕೊಂಡು ಫೊಟೋಶೂಟ್ ಮಾಡಿಕೊಳ್ಳುತ್ತಿದ್ದ ವೇಳೆ ಪೊಲೀಸರು ಈ ಫೋಟೋಶೂಟ್ಗೆ ಬ್ರೇಕ್ ಹಾಕಿದ್ದಾರೆ. ಇದರಿಂದ ಬೇಸರಗೊಂಡ ಮಾಡೆಲ್ ಖ್ಯಾತಿ ಶ್ರೀ ಇನ್ಸ್ಟಾಗ್ರಾಂ ಪೇಜ್ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ನೈತಿಕ ಪೊಲೀಸ್ಗಿರಿ ಮಾಡೋದಕ್ಕೆ ಸ್ಥಳೀಯರಿಗೆ ಯಾರು ಅಧಿಕಾರ ನೀಡಿದ್ದಾರೆ ಎಂದು ತನ್ನ ಪೇಜ್ನಲ್ಲಿ ಬರೆದು ಪ್ರಶ್ನೆ ಮಾಡಿದ್ದಾರೆ.
ಆಕೆಯ ಪೋಸ್ಟ್ ನ ನಂತರ ಉಡುಪಿಯ ಸಂಘಟನೆಗಳಿಗೆ ಬೀಚ್ ಬಳಿ ಇಂತಹದೊಂದು ಘಟನೆ ನಡೆದಿದೆ ಎಂಬುದು ಗೊತ್ತಾಗಿದೆ. ಹೀಗಾಗಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪೊಲೀಸರ ಪರ ಪೋಸ್ಟ್ಗಳನ್ನು ಹಾಕಿದ್ದಾರೆ. ಇನ್ನು ಪರಶುರಾಮನ ಸೃಷ್ಟಿಯ ನಾಡಿನಲ್ಲಿ ಇಂತಹದಕ್ಕೆ ಅವಕಾಶ ಇಲ್ಲಾ ಎಂದು ಕೆಲವರು ತಿರುಗೇಟು ನೀಡಿದ್ದಾರೆ.