ಕಾರ್ಕಳ, ಆ.30(DaijiworldNews/AA): ಟ್ಯಾಂಕ್ ತುಂಬ ಪೆಟ್ರೋಲ್ ತುಂಬಿಸಿ ಹಣ ನೀಡಿದೇ ವಾಹನದೊಂದಿಗೆ ಪರಾರಿಯಾದ ಘಟನೆ ಕಾರ್ಕಳ ತಾಲೂಕು ಜಂಕ್ಷನ್ ಬಳಿಯ ಪೆಟ್ರೋಲ್ ಬಂಕ್ ವೊಂದರಲ್ಲಿ ಆಗಸ್ಟ್ 29ರ ನಸುಕಿನ ಜಾವದಲ್ಲಿ ನಡೆದಿದೆ.
ಕಾರ್ಕಳದ 'ಅನು ಪ್ಯೂಯೆಲ್ ಪಂಪ್' ಎಂಆರ್ಪಿಎಲ್ ದಿನದ 24 ಘಂಟೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ದುರುಪಯೋಗ ಮಾಡಿದ ವ್ಯಕ್ತಿಯೊಬ್ಬ ಈ ದಿನ ಬೆಳಗ್ಗಿನ ಜಾವ 2.50ಕ್ಕೆ ಬಿಳಿ ಬಣ್ಣದ ಕಾರಿನಲ್ಲಿ ಕಾರ್ಕಳ ಬೈಪಾಸ್ ರಸ್ತೆಯ ಕಡೆಯಿಂದ ಬಂದಂತಹ ವ್ಯಕ್ತಿಯೊಬ್ಬ ಪುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸುವಂತೆ ಹೇಳಿದ್ದಾನೆ.
ಗ್ರಾಹಕನ ಸೂಚನೆಯಂತೆ 4253.88 ಮೊತ್ತದಷ್ಟು ಟ್ಯಾಂಕ್ ಪೂರ್ತಿ ಪೆಟ್ರೋಲ್ ತುಂಬಿಸಿ, ಟ್ಯಾಂಕ್ ನಿಂದ ಪೈಪ್ಬ ಬೇರ್ಪಡಿಸುತ್ತಿದ್ದಾಗ ಗ್ರಾಹಕ ತನ್ನ ವಾಹನವನ್ನು ಚಲಾಯಿಸಿ ಹೊರಟು ಹೋಗಿದ್ದಾನೆ. ವಾಹನವು ಬೈಲೂರು-ಉಡುಪಿ ರಸ್ತೆಯಲ್ಲಿ ಹೋಗಿದ್ದು. ವಂಚಕ ಗ್ರಾಹಕ ತುಳುವಿನಲ್ಲಿ ಮಾತನಾಡುತ್ತಿದ್ದನು. ಗ್ಯಾರೇಜ್ ಎಲ್ಲಿಯಾದರೂ ಓಪನ್ ಇದೆಯಾ ಅಂತ ಮೊದಲಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿಯಲ್ಲಿ ವಿಚಾರಿಸಿ ನಂತರ ಮಂಕುಬೂದಿ ಎರಚಿದ್ದಾನೆ ಎಂದು ತಿಳಿದುಬಂದಿದೆ.
ವಾಹನದ ಕುರಿತು ಮಾಹಿತಿ ಲಭಿಸಿದರೆ, 9964070507 ಮೊಬೈಲ್ ಸಂಖ್ಯೆಗೆ ಕರೆಯನ್ನು ಮಾಡಿ ತಿಳಿಸಿ ಇಲ್ಲದಿದ್ದರೆ ಪೋಲಿಸರ ಗಮನಕ್ಕೆ ತರುವಂತೆ ಪೆಟ್ರೋಲ್ ಬಂಕ್ ಮಾಲಕ ಮಿಯ್ಯಾರು ರೋಹಿತಿ ತಿಳಿಸಿದ್ದಾರೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.