ಕುಂದಾಫುರ, ಆ.28(DaijiworldNews/AA): ಇಂದು ಕುಂದಾಪುರದಲ್ಲಿ ಎಬಿವಿಪಿ ನಡೆಸಿದ ಪ್ರತಿಭಟನೆಗೆ ಎನ್.ಎಸ್.ಯು.ಐ. ಆಕ್ರೋಶ ಹೊರಹಾಕಿದೆ. ಆಗಸ್ಟ್ 22ರಂದೇ ಪರಿಹಾರವಾದ ಸಮಸ್ಯೆಯನ್ನು ಎತ್ತಿಕೊಂಡು ಎಬಿವಿಪಿ ಪ್ರಚಾರಕ್ಕೋಸ್ಕರ ಶೋ ಮಾಡಿದೆ ಎಂದು ಎನ್.ಎಸ್.ಯು.ಐ ಮುಖಂಡ ಸುಜನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತು ವಿಶ್ವವಿದ್ಯಾನಿಲಯದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದು, ವಿಶ್ವವಿದ್ಯಾನಿಲಯವೂ ಸೆಪ್ಟಂಬರ್ ೪ರಿಂದ ಭೌತಿಕ ಅಂಕಪಟ್ಟಿ ನೀಡುವುದಾಗಿ ಒಪ್ಪಿಕೊಂಡಿದೆ. ಹಾಗಿದ್ದಾಗ್ಯೂ ಉದ್ದೇಶಪೂರ್ವಕವಾಗಿ ಎಬಿವಿಪಿ ಅದೇ ವಿಚಾರವನ್ನು ಎತ್ತಿಕೊಂಡು ಪ್ರತಿಭಟನೆ ನಡೆಸುತ್ತಿರುವುದು ಕೇವಲ ಪ್ರಚಾರಕ್ಕಾಗಿ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
ಈ ಬಗ್ಗೆ ಆಗಸ್ಟ್ 24ರಂದು ಪತ್ರಿಕಾಗೋಷ್ಟಿ ನಡೆಸಲಾಗಿದ್ದು, ಈ ವಿಚಾರ ಪತ್ರಿಕೆಗಳಲ್ಲಿಯೂ ಪ್ರಕಟವಾಗಿದೆ. ಒಂದೊಮ್ಮೆ ವಿಶ್ವವಿದ್ಯಾನಿಲಯ ಭೌತಿಕ ಅಂಕಪಟ್ಟಿ ನೀಡದೇ ಇದ್ದಲ್ಲಿ ಎಬಿವಿಪಿ ಜೊತೆಗೆ ಎನ್.ಎಸ್.ಯು.ಐ ಪ್ರತಿಭಟನೆ ನಡೆಸಲು ಬದ್ಧವಾಗಿದೆ ಎಂದು ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ಪುರ್ಕಾನ್ ಹೇಳಿದರು. ಆದರೆ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನು ಎನ್.ಎಸ್.ಯು.ಐ ಸಹಿಸುವುದಿಲ್ಲ ಎಂದರು.