ಮಂಗಳೂರು, ಆ.25(DaijiworldNews/AA): ಸಮಾಜ ಸೇವೆ ಮಾನವೀಯತೆ ಮತ್ತು ಸಂತೃಪ್ತಿ ಜೀವನದಲ್ಲಿ ಬಹಳ ಮುಖ್ಯ. ಇದನ್ನು ಅಳವಡಿಸಿಕೊಂಡಾಗ ನಾವು ಶ್ರೇಷ್ಠರೆನಿಸಿಕೊಳ್ಳುತ್ತೇವೆ. ಇಂದಿನ ಯುವಕರು ಹಾದಿತಪ್ಪುತ್ತಿರುವ ಸಮಯದಲ್ಲಿ ತುಳುನಾಡ ತುಳುವರು ಎಂಬ ಈ ವೇದಿಕೆಯು ಯುವಕರನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಕಾರ್ಯ ಮಾಡುತ್ತಿದೆ. ಯಾವುದೇ ಸಮಾಜದ ಸಕಾರಾತ್ಮಕ ಬೆಳವಣಿಗೆ ಯುವಕರಿಂದ ಸಾಧ್ಯ ಎಂದು ದಾಯ್ಜಿವರ್ಲ್ಡ್ ಸಂಸ್ಥೆಯ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ ತಿಳಿಸಿದರು.
ಸುರತ್ಕಲ್ ಸ್ಪೆಷಲ್ ಸ್ಕೂಲಿನಲ್ಲಿ ತುಳುನಾಡ ತುಳುವೆರು ಸಂಘದ ಲಾಂಛನ ಬಿಡುಗಡೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿನಿಮಾ ಹಾಗೂ ರಂಗಭೂಮಿ ನಟ, ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್ ಬೈಲ್ ಮಾತನಾಡಿ, ಇವರು ಹರೇಕಳ ಹಾಜಬ್ಬರಂತಹ ಓರ್ವ ಸಂತ ತನ್ನ ಪರಿಶ್ರಮದಿಂದ ಒಂದು ಶಾಲೆಯ ಕನಸನ್ನು ನನಸು ಮಾಡುತ್ತಾರೆ. ಅಂತೆಯೇ ಯುವಕರು ಮನಸ್ಸು ಮಾಡಿದರೆ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ಕೊಡಬಲ್ಲರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷರಾದ ಸಂದ್ಯಾ ವಹಿಸಿದರು. ಸಂಸ್ಥಾಪಕ ಅಧ್ಯಕ್ಷರಾದ ಆಕಾಶ್ ಹೆಚ್ ಕರ್ಕೇರ, ಕಾರ್ಯದರ್ಶಿ ಭರತ್ ಬಲ್ಲಾಳ, ಅತಿಥಿಗಳಾದ ಪ್ರಸಾದ್ ಕುಮಾರ್ ರೈ ವಕೀಲರು ಸುಹಾನ್ ಆಳ್ವ ದಕ್ಷಿಣ ಕನ್ನಡ ಯುವಕಾಂಗ್ರೆಸ್ ಅಧ್ಯಕ್ಷರು ವಸಂತ್ ಬಂಗೇರ ಸುರತ್ಕಲ್ ಬಿಜೆಪಿ ಅಧ್ಯಕ್ಷರು ಎನ್. ಕೆ. ಸಾಲಿಯಾನ್ ಲಯನ್ಸ್ ಸ್ಪೆಷಲ್ ಸ್ಕೂಲ್ ನ ಮುಖ್ಯೋಪಾಧ್ಯಾಯರು ಪ್ರೇಮ ಗಣೇಶ್ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು
ಈ ಕಾರ್ಯಕ್ರಮದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಧನ ಸಹಾಯ ಹಾಗೂ ಉತ್ತಮ ಫಲಿತಾಂಶ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಾಗೆ ಸಮಾಜಕ್ಕಾಗಿ ಸೇವೆ ಸಲ್ಲಿಸಿದ 5 ಗಣ್ಯರನ್ನು ಸನ್ಮಾನಿಸಲಾಯಿತು.
ಸೌಮ್ಯ ಸ್ವಾಗತಿಸಿದರು. ನವೀನ್ ಚಿತ್ರಪುರ ನಮ್ಮ ಟಿವಿ ಕಾರ್ಯಕ್ರಮವನ್ನು ನಿರೂಪಿಸಿದರು. ಪೂಜಾ ಮತ್ತು ಅನನ್ಯರೈ ಪ್ರಾರ್ಥನೆಗೈದರು.