ಕಾಸರಗೋಡು, ಆ.24(DaijiworldNews/AK): 2008 ರಲ್ಲಿ ನಡೆದ ಕಾಸರಗೋಡು ಗಲಭೆ ಸಂದರ್ಭದಲ್ಲಿ ಅಡ್ಕತ್ತ ಬೈಲ್ ಬಿಲಾಲ್ ಮಸೀದಿ ಸಮೀಪದ ಸಿ. ಎ.ಮುಹಮ್ಮದ್ ಹಾಜಿ (56) ರವರನ್ನು ಕೊಲೆಗೈದ ಪ್ರಕರಣ ಕ್ಕೆ ಸಂಬಂಧ ಪಟ್ಟಂತೆ ಆರೋಪಿಗಳು ತಪ್ಪಿ ತಸ್ಥರೆಂದು ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಸಂತೋಷ್ ನಾಯ್ಕ್ (36), ಕೆ. ಶಿವ ಪ್ರಸಾದ್ (40) , ಕೆ.ಅಜಿತ್ ಕುಮಾರ್ (39), ಕಿಶೋರ್ ಕುಮಾರ್ (39) ತಪ್ಪಿತಸ್ಥರು. 2008 ರ ಏಪ್ರಿಲ್ 18 ರಂದು ಮುಹಮ್ಮದ್ ಹಾಜಿ ರವರನ್ನು ಕಡಿದು ಕೊಲೆ ಗೈದಿತ್ತು. ಕಾಸರಗೋಡು ಎ ಎ ಸ್ಪಿ ಪಿ. ಬಾಲಕೃಷ್ಣನ್ ನಾಯರ್ ತನಿಖೆಯ ವಿಚಾರಣೆ ನಡೆಸಿದ್ದರು.