ಕಾಸರಗೋಡು, ಮೇ 25 (Daijiworld News/MSP): ಪೆರ್ಲ ನಿವಾಸಿಯಾದ ಶಿಕ್ಷಕಿಯೋರ್ವಳು ಶಾರ್ಜಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ. ಪೆರ್ಲ ಇಡಿಯಡ್ಕ ಮರ್ಸೂನ (28) ಮೃತಪಟ್ಟವರು.
ಈ ಹಿಂದೆ ಬದಿಯಡ್ಕ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಇವರು ಆರು ತಿಂಗಳ ಹಿಂದೆ ಸಂಬಂಧಿಕರ ಜತೆ ಶಾರ್ಜಾಕ್ಕೆ ತೆರಳಿದ್ದರು. ಅಲ್ಲಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಿಗ್ಗೆ ವಾಸಸ್ಥಳಲ್ಲಿಯೇ ಹೃದಯಾಘಾತಕ್ಕೊಳಗಾದ ಮರ್ಸೂನ ರನ್ನು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.
ಮೃತದೇಹವನ್ನು ಊರಿಗೆ ತರುವ ಸಿದ್ಧತೆ ನಡೆಯುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.