ಕುಂದಾಪುರ, ಆ.22 (DaijiworldNews/AK): ಕಳೆದ ಜುಲೈಯಲ್ಲಿ ಸಚಿವರನ್ನು ಭೇಟಿಯಾಗಿ ಉಡುಪಿ ಸಂಸದ ಶ್ರೀ ಶ್ರೀನಿವಾಸ್ ಪೂಜಾರಿಯವರು ನೀಡಿದ ಮನವಿ ಹಾಗು ಆ ಬಳಿಕ ವರದಿಯಾದ ಮತ್ಸಗಂದಾ ಸೀಲಿಂಗ್ ಕುಸಿತದ ಬಗ್ಗೆ ರೈಲ್ವೇ ಬೊರ್ಡಿಗೆ ಮತ್ತೆ ಸಂಪರ್ಕೀಸಿ ಸಂಸದರು ನೀಡಿದ ಸೂಚನೆಯಂತೆ, ಇದೀಗ ಮತ್ಸಗಂದಾ ರೈಲಿಗೆ LHB ಕೋಚ್ ಅಳವಡಿಕೆಯ ಪ್ರಕ್ರಿಯೆ ಚುರುಕುಗೊಂಡಿದೆ.
ಸಂಸದರ ಪ್ರಯತ್ನಗಳ ಬಳಿಕ ಕೊಂಕಣ ನಿಗಮ ದಕ್ಷಿಣ ರೈಲ್ವೇ ಹಾಗು ರೈಲ್ವೇ ಮಂಡಳಿಗೆ ಈ ಬಗ್ಗೆ ಕ್ಷಿಪ್ರ ಕೋಚ್ ಅಳವಡಿಕೆಯ ಮನವಿ ನೀಡಿತ್ತು.ಹಾಗೆಯೇ ಸಂಸದರ ಸೂಚನೆಯಂತೆ ಇದೀಗ ದಕ್ಷಿಣ ರೈಲ್ವೆ ಕೊಂಕಣ ರೈಲ್ವೆ ಹಾಗು ಕೇಂದ್ರ ರೈಲ್ವೇಗೆ ಮತ್ಸಗಂದಾ ರೈಲಿಗೆ ಎಲ್ ಎಚ್ ಬಿ ಅಳವಡಿಕೆಯ ಕುರಿತು ತಾಂತ್ರಿಕ ಒಪ್ಪಿಗೆ ಕೇಳಿ ಮಾತುಕಥೆ ನಡೆಸಿದೆ.
ರೈಲು ಮಂಡಳಿಗೂ ಅತ್ಯಂತ ಶೀಘ್ರವಾಗಿ LHB ಕೋಚ್ ನೀಡುವಂತೆ ಸಂಸದರು ಸೂಚಿಸಿದ ಹಿನ್ನೆಲೆಯಲ್ಲಿ ,ಕಾರ್ಖಾನೆಯಿಂದ ಕೋಚ್ ನಿರ್ಮಾಣವಾಗಿ ದಕ್ಷಿಣ ರೈಲ್ವೆಗೆ ಕೋಚ್ ಆದ್ಯತೆಯ ನೆಲೆಯಲ್ಲಿ ಹಸ್ತಾಂತರವಾಗಲಿದೆ.