ಉಡುಪಿ, ಆ.22(DaijiworldNews/AK):ಎಂಎಲ್ ಸಿ ಐವನ್ ಡಿಸೋಜಾ ಇವರ ಮನೆಗೆ ಕಲ್ಲೆಸೆದ ಕೃತ್ಯವನ್ನು ಭಾರತೀಯ ಕ್ರೈಸ್ತ ಒಕ್ಕೂಟದ ಸದಸ್ಯರು ತೀವ್ರ ವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಭಾರತೀಯ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಸನ್ಮಾನ್ಯ ವಿಧಾನ ಪರಿಷತ್ತಿನ ಸದಸ್ಯರಾದ ಐವನ್ ಡಿಸೋಜಾ ಇವರ ಮನೆಗೆ ಕಲ್ಲೆಸೆದು ಭಯಪಡಿಸಿದ್ದನ್ನು ಗಮನಿಸಿದಾಗ ದ್ವೇಷದ ರಾಜಕಾರಣ ಮತ್ತು ಶಾಂತಿ ಕದಡುವ ಹುನ್ನಾರ ಎಂಬದು ಸ್ಪಷ್ಟವಾಗಿರುತ್ತದೆ.
ಈ ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಮತ್ತು ಇದಕ್ಕೆ ಕುಮ್ಮಕ್ಕು ಕೊಟ್ಟವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕೆಂದು ಭಾರತೀಯ ಕ್ರೈಸ್ತ ಒಕ್ಕೂಟ ಒತ್ತಾಯಿಸುತ್ತೇವೆ ಮತ್ತು ಈ ಅಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ” ಎಂದಿದ್ದಾರೆ.