ಮಂಗಳೂರು, ಆ.22 (DaijiworldNews/TA) : ಐವನ್ ಸ್ವಲ್ಪ ಮೆಂಟಲ್ ಆಗಿ ಬಾಯಿಗೆ ಬಂದಹಾಗೆ ಒದರುತ್ತಾನೆ ಎಂದು ಏಕವಚನದಲ್ಲೇ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆಗೆ ಆಗ್ರಹಿಸಿ ನಡೆದಂತಹ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ, ಮಾತನಾಡಿದ ಅವರು, ಐವನ್ ನನ್ನನ್ನು ಏನು ಮಾಡುತ್ತಾನೋ ಗೊತ್ತಿಲ್ಲ. ಹೆಲ್ಮೆಟ್ ಹಾಕಿದ ಇಬ್ಬರು ಐವನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಇದೂ ಇವರ ಹುಡುಗರ ಕೆಲಸವೇ ಆಗಿರಬಹುದು. ಇದಕ್ಕೂ ಆ ಇಬ್ಬರು ನಾನು ಮತ್ತು ವೇದವ್ಯಾಸ್ ಕಾಮತ್ ಎಂದು ಕೇಸ್ ಹಾಕುತ್ತಾರೋ ಗೊತ್ತಿಲ್ಲ. ನಮ್ಮ ಮೇಲೆ ಸಾಕಷ್ಟು ಕೇಸ್ ಕೂಡಾ ಹಾಕಿದ್ದಾರೆ. ಐವನ್ ಸ್ವಲ್ಪ ಮೆಂಟಲ್ ಆಗಿ ಬಾಯಿ ಬಂದಾಗೆ ಹೇಳಿಕೆ ನೀಡುತ್ತಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.