ಕಾಸರಗೋಡು, ಆ.20(DaijiworldNews/AK): ಎಂಡೋಸಲ್ಫಾನ್ ಸಂತಸ್ತ ವಲಯದ ಅಮ್ಮಂದಿರಿಗಾಗಿ ( ತಾಯಿ) ಕೇರಳ ಮಹಿಳಾ ಆಯೋಗ ಶೀಘ್ರ ಅದಾಲತ್ ನಡೆಸಲಿದೆ ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ನ್ಯಾಯವಾದಿ ಪಿ . ಕುಞೆಷಾ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲಾ ಯೋಜನಾ ಆಯೋಗದ ಕಚೇರಿಯಲ್ಲಿ ನಡೆದ ಮಹಿಳಾ ಆಯೋಗದ ಅದಾಲತ್ ಬಳಿಕ ಈ ವಿಷಯ ತಿಳಿಸಿದರು . ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅದಾಲತ್ ನಡೆಸಲಾಗುವುದು . ಕಾಸರಗೋಡು ಜಿಲ್ಲೆಗೆ ವಿಶೇಷ ಆದ್ಯತೆ ನೀಡಲಾಗುವುದು. ಎಂದರು.
ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತಿವೆ. ಕೌಟುಂಬಿಕ ದೌರ್ಜನ್ಯ ಕುರಿತ ಹೆಚ್ಚಿನ ದೂರುಗಳು ಅದಾಲತ್ ಗಳಿಗೆ ಲಭಿಸುತ್ತಿವೆ. ಇದನ್ನು ಆಯೋಗ ಗಂಭೀರವಾಗಿ ಗಮನಿಸುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನಾರಾವರ್ತನೆಯಾಗದಂತೆ ಜಾಗೃತಿ ಮೂಡಿಸುವ ಕೆಲಸ ನಡೆಸಲಾಗುವುದು ಎಂದು ಹೇಳಿದರು.
ಅದಾಲತ್ ನಲ್ಲಿ ಒಟ್ಟು ೩೯ ದೂರುಗಳು ಲಭಿಸಿದ್ದು , ಎರಡು ದೂರುಗಳನ್ನು ಇತ್ಯರ್ಥಗೊಳಿಸಲಾಯಿತು. ನಾಲ್ಕು ದೂರುಗಳ ಬಗ್ಗೆ ವರದಿ ಕೇಳಲಾಯಿತು. ಉಳಿದ ದೂರುಗಳ ಬಗ್ಗೆ ಮುಂದಿನ ಅದಾಲತ್ ಗೆ ಮುಂದೂಡಲಾಯಿತು. ಅದಾಲತ್ ನಲ್ಲಿ ಕ್ರೈಮ್ ಬ್ರಾಂಚ್ ಡಿ ವೈ ಎಸ್ಪಿ ಪಿ . ಉತ್ತಮ್ ದಾಸ್ , ನ್ಯಾಯವಾದಿ ಪಿ . ಸಿಂಧು, ಮಹಿಳಾ ಸೆಲ್ ಎಸ್. ಐ ಶರಣ್ಯ , ಫ್ಯಾಮಿಲಿ ಕೌನ್ಸಿಲ್ ಸದಸ್ಯೆ ರಮ್ಯಮೋಲ್ ಉಪಸ್ಥಿತರಿದ್ದರು