ಮಂಗಳೂರು, ಆ.20(DaijiworldNews/AK): ಸರಕಾರಿ ಪ್ರೌಢಶಾಲೆ, ನಾಲ್ಯ ಪದವು ಇಲ್ಲಿನ ವಿದ್ಯಾರ್ಥಿಗಳ ಬಾಲ್ ಬ್ಯಾಡ್ಮಿಂಟನ್ ತಂಡಕ್ಕೆ ಸ್ಥಳೀಯ ದಾನಿಗಳ ನೆರವಿನಿಂದ ರ್ಯಾಕೆಟ್ ಮತ್ತು ಬಾಲ್ಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.
ಸುಮಾರು 30ಸಾವಿರ ಮೌಲ್ಯದ ಬ್ಯಾಡ್ಮಿಂಟನ್ ರ್ಯಾಕೆಟ್ಗಳು ಹಾಗೂ ಬಾಲ್ಗಳನ್ನು ಶಿಕ್ಷಣಾಸ್ತಕರು ಹಾಗೂ ದಾನಿಗಳಾದ ವಿದ್ಯಾದೀವಿಗೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷಕರು ದೇವಾನಂದ, ಸಿವಿಲ್ ಕಂಟ್ರಾಕ್ಟರ್ ಅಸೋಸಿಯೇಶನ್ ಸದಸ್ಯರಾದ ನಾರಾಯಣ ದೇವಾಡಿಗ, ಭವಾನಿ ಶಂಕರ, ಲಕ್ಷ್ಮೀ ಪ್ರಸಾದ್ , ಕೇಶವ ಕೆ. ಹಾಗೂ ಚಂದನ್ ದಾಸ್ ಇವರ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾಭಿಮಾನಿಗಳಾದ ಕುಶಲ್ ಕುಮಾರ್, ಅಧ್ಯಕ್ಷರು ಪದವು ಫ್ರೆಂಡ್ಸ್ ಸರ್ಕಲ್, ಆಶೋಕ್ ಕುಮಾರ್, ಸಂಚಾಲಕರು, ವಿದ್ಯಾದೀವಿ ಚಾರಿಟೇಬಲ್ ಟ್ರಸ್ಟ್, ಶಾಲೆಯ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕ ವರ್ಗ ಉಪಸ್ಥಿತರಿದ್ದರು.
ಕಳೆದ ಎರಡು ವರ್ಷಗಳಿಂದ ಶಾಲ;ಆ ಬ್ಯಾಡ್ಮಿಂಟನ್ ತಂಡವು ಮೈಸೂರು ವಿಭಾಗ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದೆ. ಸರಕಾರಿ ಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಘೋಷಿಸಿ ವಿಶೇಷ ಸಾಧನೆಗೆ ಪ್ರೇರೇಪಿಸುವ ದಾನಿಗಳ ನೆರವಿಗೆ ಮುಖ್ಯಶಿಕ್ಷಕರು ಧನ್ಯವಾದ ಸಲ್ಲಿಸಿದರು.