ಕಾಸರಗೋಡು, ಆ.19(DaijiworldNews/AA): ಸುಮಾರು 5.970 ಕಿ.ಲೋ. ಗಾಂಜಾ ಸಹಿತ ಓರ್ವನನ್ನು ರೈಲ್ವೆ ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಪೈವಳಿಕೆ ಬಾಯಿಕಟ್ಟೆ ಮಂಜತ್ತೊಡಿಯ ಅರುಣ್ ಕುಮಾರ್ (27) ಬಂಧಿತ ಆರೋಪಿ.
ರವಿವಾರ ರಾತ್ರಿ ಕಾಸರಗೋಡು ರೈಲ್ವೆ ನಿಲ್ದಾಣದ ಒಂದನೇ ಫ್ಲಾಟ್ ಫಾಮ್ ನಲ್ಲಿ ಸಂಶಯಾಸ್ಪದಾಗಿ ನಿಂತುಕೊಂಡಿದ್ದ. ಈ ಸಂದರ್ಭ ಈತನನ್ನು ಪೊಲೀಸರು ವಿಚಾರಿಸಿದಾಗ ಸಂಶಯಾಸ್ಪದವಾಗಿ ಉತ್ತರ ನೀಡಿದ್ದಾನೆ. ಬಳಿಕ ಈತನ ಬಳಿ ಇದ್ದ ಪ್ಲಾಸ್ಟಿಕ್ ಕವರನ್ನು ಪರಿಶೀಲಸಿದಾಗ ಗಾಂಜಾ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.