ಕಾಸರಗೋಡು,ಮೇ 25 (Daijiworld News/MSP): ಕಾಸರಗೋಡಿನ ಜನತೆಗಾಗಿ ಸಂಸತ್ ನಲ್ಲಿ ಧ್ವನಿಯಾಗುವೆ. ಸಂಸದನಾಗಿ ಎಷ್ಟು ಸಾಧ್ಯವೇ ಅಷ್ಟು ಕೆಲಸವನ್ನು ಕಾಸರಗೋಡು ಜನತೆಗೆ ಮಾಡಿ ತೋರಿಸುವೆ ಎಂದು ಕಾಸರಗೋಡು ಲೋಕಸಭಾ ಕ್ಷೇತ್ರದ ನೂತನ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅಭಿಪ್ರಾಯಪಟ್ಟರು.
ಅವರು ಸಂಸದರಾಗಿ ಆಯ್ಕೆಯಾದ ಬಳಿಕ ಕಾಸರಗೋಡು ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು . ಜಿಲ್ಲೆಯ ಅಭಿವೃದ್ಧಿ ತನ್ನ ಗುರಿ. ಯಾರೂ ಶತ್ರುಗಳಲ್ಲ. ತನಗೆ ಮತ ಹಾಕಿದವರು, ಹಾಕುವರು ಎಲ್ಲರೂ ಒಂದೇ . ಕೇಂದ್ರ - ರಾಜ್ಯ ಸರಕಾರದೊಂದಿಗೆ ಉತ್ತಮ ಬಾಂಧವ್ಯ ಮೂಡಿಸಿ ಜಿಲ್ಲೆಗೆ ಬೇಕಾದ ಯೋಜನೆ ಅಭಿವೃದ್ಧಿ ಅನುಷ್ಠಾನಕ್ಕೆ ತರುವುದು ನಮ್ಮ ಗುರಿಯಾಗಿದೆ ಎಂದರು.
ಜಿಲ್ಲೆಯಲ್ಲಿರುವ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳ ಗಮನ ಹರಿಸಲಾಗುವುದು. ಭಾಷಾ ಅಲ್ಪಸಂಖ್ಯಾತರು ಸವಲತ್ತುಗಳಿಲ್ಲದೆ ಸಮಸ್ಯೆಯಲ್ಲಿದ್ದರೆ . ಈ ಬಗ್ಗೆ ಕೇಂದ್ರ - ರಾಜ್ಯ ಸರಕಾರಗಳ ಗಮನ ಸೆಳೆದು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು . ಕನ್ನಡ - ತುಳು ಭಾಷೆ ಕಲಿಯಲು ಪ್ರಯತ್ನಿಸುತ್ತೇನೆ . ಮುಂದಿನ ಐದು ವರ್ಷ ಕಾಸರಗೋಡಿನ ಜನತೆಯ ಸಂಸದನಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಡಯಾಲಿಸಿ ಘಟಕ ಆರಂಭಕ್ಕೆ ಪ್ರಯತ್ನ ಮಾಡಲಾಗುವುದು. ಜಿಲ್ಲೆಯಲ್ಲಿ ಶಾಂತಿ ಮತ್ತು ನೆಮ್ಮದಿಯ ಜೀವನ ತನ್ನ ಗುರಿ, ಆರೋಗ್ಯ ವಲಯದಲ್ಲಿ ಜಿಲ್ಲೆ ಹಿಂದೆ ಉಳಿದಿದೆ. ಇಲ್ಲಿ ಚಿಕಿತ್ಸೆ ಪಡೆಯಲು ಸೂಕ್ತ ಆಸ್ಪತ್ರೆಗಳಿಲ್ಲ . ಮಂಗಳೂರು ಅಥವಾ ಹೊರ ಜಿಲ್ಲೆ , ಹೊರ ರಾಜ್ಯ ಆಸ್ಪತ್ರೆಗಳನ್ನು ಅವಲಂಬಿಸಬೇಕಿದೆ . ಏಮ್ಸ್ ಹಾಗೂ ಕೇಂದ್ರೀಯ ವಿದ್ಯಾಲಯದ ಅಧೀನದಡಿ ಆಸ್ಪತ್ರೆ ಆರಂಭಿಸಲು ಕೇಂದ್ರದ ಮೇಲೆ ಒತ್ತಡ ತರಲಾಗುವುದು. ಕುಡಿಯುವ ನೀರು ತಲಪಿಸಲು ಯೋಜನೆ ಹಾಕಿಕೊಳ್ಳಲಾಗುವುದು. ಕೇಂದ್ರದಿಂದ ಅನುದಾನಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಸೀತಾಂಗೋಳಿ ಯಲ್ಲಿರುವ ಸಾರ್ವಜನಿಕ ವಲಯ ಸಂಸ್ಥೆಯಾದ ಎಚ್ ಎ ಎಲ್ ಘಟಕವನ್ನು ಪುನರ್ ಜ್ಜೀವ ಗೊಳಿಸಲು ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು .
ಉನ್ನತ ಶಿಕ್ಷಣಕ್ಕೆ ಜಿಲ್ಲೆಯಲ್ಲಿ ಸಂಸ್ಥೆಗಳಿಲ್ಲ . ಈಗ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಪ್ರತಿಯೊಬ್ಬರ ಸಹಕಾರ ಬೇಕಿದೆ. ಸಿಪಿಎಂ ಹಿಂಸಾತ್ಮಕ ರಾಜಕೀಯದಿಂದ ಹಿಂದೆ ಸರಿಯಬೇಕು . ಜನರಲ್ಲಿರುವ ಭಯದ ವಾತಾವರಣವನ್ನು ಹೋಗಲಾಡಿಸಬೇಕು. ಜಿಲ್ಲೆಯ ಜನತೆಯ ಆಶೋತ್ತರ ಈಡೇರಿಕೆಗೆ ಹೋರಾಟ ನಡೆಸುವುದಾಗಿ ಹೇಳಿದರು.
ಜನರಿಗೆ ಅನುಕೂಲಕ್ಕಾಗಿ ಶೀಘ್ರ ಸಂಸದರ ಕಚೇರಿಯನ್ನು ತೆರೆಯಲಾಗುವುದು . ಜನರಿಗೆ ಯಾವ ಸಂದರ್ಭದಲ್ಲಾದರೂ ಸ್ಪಂದಿಸಬಹುದಾಗಿದೆ. ಅಗತ್ಯ ಬಿದ್ದಲ್ಲಿ ಕಣ್ಣೂರು ಜಿಲ್ಲೆಯಲ್ಲಿರುವ ಕಾಸರಗೋಡು ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಾದ ಕಲ್ಯಾಶ್ಯೇರಿ, ಪಯ್ಯನೂರು ಅಲ್ಲದೆ ತ್ರಿಕ್ಕರಿಪುರ ಕ್ಷೇತ್ರಗಳಿಗೆ ಅನುಕೂಲವಾಗುವಂತೆ ಉಪ ಕಚೇರಿ ತೆರೆಯಲಾಗುವುದು ಎಂದು ಉಣ್ಣಿತ್ತಾನ್ ಹೇಳಿದರು. ಶಾಸಕ ಎನ್.ಎ ನೆಲ್ಲಿಕುನ್ನು, ಕಾಂಗ್ರೆಸ್ ಹಿರಿಯ ಮುಖಂಡ ಸಿ.ಕೆ ಶ್ರೀಧರನ್ ಮೊದಲಾದವರಿದ್ದರು.