ಕಾಸರಗೋಡು, ಆ.19(DaijiworldNews/AA): ಕಯ್ಯಾರ್ ಕ್ರಿಸ್ತರಾಜ ದೇವಾಲಯದ ನೂತನ ಕಟ್ಟಡದ ನಿರ್ಮಾಣದಂಗವಾಗಿ ಬಡ ಕುಟುಂಬಗಳಿಗೆ ನಿರ್ಮಿಸಿದ ಎರಡು ನೂತನ ಮನೆಗಳು ಹಾಗೂ ಮೂರನೇ ಮನೆಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಚೇವಾರ್ ಸಮೀಪ ಈ ಮನೆಗಳನ್ನು ನಿರ್ಮಿಸಲಾಗಿತ್ತು. ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೇಳ ಶೋಕಮಾತಾ ಪುಣ್ಯಕ್ಷೇತ್ರದ ಧರ್ಮಗುರು ಹಾಗೂ ಕಾಸರಗೋಡು ವಲಯದ ಪ್ರಧಾನ ಧರ್ಮಗುರು ಫಾ. ಸ್ಟ್ಯಾನಿ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಎಸ್ಟೇಟ್ ಮ್ಯಾನೇಜರ್ ಫಾ. ಮ್ಯಾಕ್ಷಿ೦ ರೊಜಾರಿಯೊ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾ. ವಿಶಾಲ್ ಮೋನಿಸ್, ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಝೀನಾ ಡಿಸೋಜ, ಸ್ಥಳ ದಾನಿ ಲಿಗೋರಿ ಡಿಸೋಜ ಮತ್ತು ಬ್ರಿಜಿತ್ ಡಿಸೋಜ, ಮರಿಯೆಚೆ ಲೀಜನ್ ಸಂಘಟನೆಯ ಅಧ್ಯಕ್ಷೆ ಭವ್ಯಾ ಮೊಂತೆರೋ, ಸಾಂ. ವಿಶೆಂತ್ ಪಾವ್ಲ್ ಘಟಕದ ಅಧ್ಯಕ್ಷ ಜೋಸೆಫ್ ಸುವಾರಿಸ್, ಕೆಥೋಲಿಕ್ ಸಭಾ ಘಟಕದ ಅಧ್ಯಕ್ಷೆ ಸುನಿತಾ ಡಿಸೋಜ, ಸಿಸ್ಟರ್ ಜಾಸ್ಮಿನ್ ಲೂವಿಸ್ ಮೊದಲಾದವರು ಉಪಸ್ಥಿತರಿದ್ದರು.
ಮೂರನೇ ಮನೆಗೆ ಆಶೀರ್ವಚನ ಕಾರ್ಯವೂ ಈ ಸಂದರ್ಭದಲ್ಲಿ ನಡೆಯಿತು. ಇದನ್ನು ಫಾ. ಸ್ಟ್ಯಾನಿ ಪಿರೇರಾ ನೆರವೇರಿಸಿದರು. ಮನೆಗಳ ನಿರ್ಮಾಣಕ್ಕೆ ಸ್ಥಳ ದಾನ ನೀಡಿದ ಲಿಗೋರಿ ಡಿಸೋಜ ಮತ್ತು ಬ್ರಿಜಿತ್ ಡಿಸೋಜ ದಂಪತಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಿಸ್ಟರ್ ರೀನಾ ಸೆರಾವೊ ಪರಿಚಯ ಮಾಡಿದರು.
ಮನೆಗೆ ದಾನ ಹಾಗೂ ಸಹಕಾರ, ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ಸಂತೋಷ್ ಕ್ರಾಸ್ತಾ ಹಾಗೂ ಪೀಟರ್ ಡಿಸೋಜ ರವರಿಗೆ ಈ ಮನೆಯನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಇಂಜಿನಿಯರ್ ರಾಧಾಕೃಷ್ಣ ಮುಳಿಯರವರನ್ನು ಸನ್ಮಾನಿಸಲಾಯಿತು. ಫಾ. ವಿಶಾಲ್ ಮೋನಿಸ್ ಸ್ವಾಗತಿಸಿದರು. ರೋಶನ್ ಡಿಸೋಜ ವಂದಿಸಿದರು. ಆನ್ಸನ್ ಮತ್ತು ರೀಷಾ ಕಾರ್ಯಕ್ರಮ ನಿರೂಪಿಸಿದರು.