ಮಂಗಳೂರು, ಆ.18(DaijiworldNews/AA): ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಭಾರಿ ಲಾಭಗಳಿಸಬಹುದೆಂದು ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಆನ್ಲೈನ್ ವಂಚಕರು 34.5ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ದುರು ದಾಖಲಾಗಿದೆ.
ದೂರುದಾರರು ಜುಲೈ 1 ರಂದು ಇನ್ಸ್ಟಾಗ್ರಾಂನಲ್ಲಿ ಲಿಂಕ್ ಅನ್ನು ವೀಕ್ಷಿಸಿದ್ದು, ಅದೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ್ದರು. ನಂತರ ಕೆಲವು ಅಪರಿಚಿತರು ಸಂತ್ರಸ್ತೆಯನ್ನು ಚಾಟ್ ಬಾಕ್ಸ್ ಮೂಲಕ ಸಂಪರ್ಕಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಭಾರಿ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಬಳಿಕ ದೂರುದಾರರು ಜುಲೈ 1 ರಿಂದ ಆಗಸ್ಟ್ 12 ರವರೆಗೆ ವಿವಿಧ ವಹಿವಾಟುಗಳಲ್ಲಿ 34.5 ಲಕ್ಷ ರೂ. ಅನ್ನು ಹೂಡಿಕೆ ಮಾಡಿದ್ದಾರೆ. ಕೆಲ ದಿನಗಳ ನಂತರ ಸಂತ್ರಸ್ತೆಯು ಹೂಡಿಕೆ ಮೊತ್ತವನ್ನು ಹಿಂಪಡೆಯಲು ಬಯಸಿದಾಗ, ಅಪರಿಚಿತರು 20% ತೆರಿಗೆಯನ್ನು ಕೇಳಿದರು. ದೂರುದಾರರು ತಮ್ಮ ಹೂಡಿಕೆಯ ಮೊತ್ತವನ್ನು ಪಡೆಯಲು ಸಾಕಷ್ಟು ಪ್ರಯತ್ನಿಸಿದರೂ ಅವರಿಗೆ ಹೂಡಿಕೆ ಹಣ ಹಿಂಪಡೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಅವರು ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.