ಮಂಗಳೂರು,ಮೇ 24(Daijiworld News/MSP): ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನಿಷ್ಪಕ್ಷಪಾತ, ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ನಡೆಯುವಂತೆ ಸಹಕರಿಸಿದ ಮಂಗಳೂರು ನಾಗರೀಕರಿಗೆ ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, " ಶಾಂತಿಯುತ ಚುನಾವಣೆ ನಡೆಸಲು ಪೊಲೀಸರಿಗೆ ಸಹಕಾರ ನೀಡಿದ್ದಕ್ಕಾಗಿ ಮಂಗಳೂರಿನ ಜನತೆಗೆ ಧನ್ಯವಾದಗಳು. ಚುನಾವಣೆ ಘೋಷಣೆಯಾದ ದಿನದಿಂದ , ಪ್ರಚಾರ , ಮತದಾನ ಹಾಗೂ ಮತ ಎಣಿಕೆಯ ದಿನದವರೆಗೆ ಯಾವುದೇ ಕೆಟ್ಟ ಘಟನೆ ನಡೆಯಲಿಲ್ಲ.. ಭವಿಷ್ಯದ ಸವಾಲುಗಳಿಗೂ ಇದೇ ರೀತಿಯ ಸಹಕಾರ ಮಂಗಳೂರು ಜನರಿಂದ ನಿರೀಕ್ಷಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಕೋಮಗಲಭೆ ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಲ್ಪಟ್ಟ ಲೋಕ ಸಭೆ ಚುನಾವಣೆ ಯಾವುದೇ ಗದ್ದಲ ಗಲಾಟೆಗಳಿಲ್ಲದೆ ಶಾಂತಿಯುತವಾಗಿ ನಡೆದಿತ್ತು. ಮಾತ್ರವಲ್ಲದೆ ಪ್ರಚಾರದಿಂದ ಫಲಿತಾಂಶದವರೆಗೆ ಗೊಂದಲಗಳಿಲ್ಲದೆ ಮುಕ್ತ, ಮತ್ತು ಶಾಂತಿಯುತ ಚುನಾವಣೆಗೆ ಮಂಗಳೂರು ಜನತೆ ಸಾಕ್ಷಿಯಾಗಿದ್ದರು.