ಪ್ಯಾರೀಸ್ ,ಮೇ 22 (Daijiworld News/MSP): 130 ವರ್ಷಗಳ ಇತಿಹಾಸವನ್ನು ಹೊಂದಿರುವ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಐಫೆಲ್ ಟವರ್ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ಇಂತಹ ಇತಿಹಾಸ ಹೊಂದಿರುವ ಐಫೆಲ್ ಟವರ್ ನ್ನು ಓರ್ವ ಸೋಲ್ಡ್ ಔಟ್ ಮಾಡಿದ್ದಾನೆ.
ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಶತಮಾನದ ಬೃಹತ್ ಮಾನವ ನಿರ್ಮಿತ ಗೋಪುರ ಇಂದಿಗೂ ಪ್ಯಾರೀಸ್ ಸೇರಿ ಇಡೀ ಯುರೋಪ್ ಪ್ರವಾಸದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಆದರೆ ಒಬ್ಬ ಕತರ್ನಾಖ್ ಖದೀಮ ಐಫೆಲ್ ಟವರ್ ಅನ್ನು ಎರಡು ಗುಜರಿ ಡೀಲಿಂಗ್ ಕಂಪೆನಿಗಳಿಗೆ ಪ್ರತ್ಯೇಕವಾಗಿ ಮಾರಿಬಿಟ್ಟಿದ್ದಾನೆ.
ಈ ಖದೀಮನ ಹೆಸರು ಆತನ ಹೆಸರು ರಾಬರ್ಟ್ ವಿ. ಮಿಲ್ಲರ್, ಹೀಗೆಂದು ಈತ ಪ್ಯಾರಿಸ್ ನವನಲ್ಲ. ಆಸ್ಟ್ರೇಲಿಯಾದ ಹಂಗೇರಿಯವನು. ಐಫೆಲ್ ಟವರ್ನ ಪುನರ್ ನವೀಕರಣದ ಬಗ್ಗೆ ಪತ್ರಿಕೆಯಲ್ಲಿ ಬಂದಿದ್ದ ಲೇಖನವೊಂದು ಓದಿದ್ದ ಇವನ ತಲೆಯಲ್ಲಿ ಕೆಟ್ಟ ಉಪಾಯವೊಂದು ಹೊಳೆದು ಕಾರ್ಯರೂಪಕ್ಕೆ ತಂದಿದ್ದ.
ಸಂಪೂರ್ಣ ಕಚ್ಚಾ ಕಬ್ಬಿಣ ಐಫೆಲ್ ಟವರ್ ನ ಕಬ್ಬಿಣ ಮಾರಲೆಂದು ತನ್ನನ್ನು ತಾನು ಸ್ಥಳೀಯ ಸರ್ಕಾರಿ ಅಧಿಕಾರಿಯೆಂದು ಹೇಳಿಕೊಂಡು, ಪ್ಯಾರಿಸ್ನ ಐದು ಪ್ರಖ್ಯಾತ ಕಬ್ಬಿಣದ ಗುಜರಿ ಖರೀದಿಸುವ ಕಂಪೆನಿಗಳನ್ನು ಸಂಪರ್ಕಿಸಿದ್ದಾನೆ. ಇದರನ್ನು ಎರಡು ಕಂಪನಿಗಳ ಸಕಾರಾತ್ಮಕ ಪ್ರಕ್ರಿಯೆ ಸಿಕ್ಕಿದ್ದೇ ತಡ ಡೀಲ್ ಕುದುರಿಸಿ ಟವರ್ ಮಾರಾಟ ಮಾಡಿದ್ದಲ್ಲದೆ, ಅಂದಾಜು 1.50 ಲಕ್ಷ ಡಾಲರ್ ಜೋಬಿಗಿಳಿಸಿಕೊಂಡಿದ್ದಾನೆ.
ಅಂದಹಾಗೆ 1889ರಲ್ಲಿ ನಿರ್ಮಾಣಗೊಂಡ ಈ ಐಫೆಲ್ ಟವರ್ 324 ಮೀ. ಎತ್ತರವಿದ್ದು 7,300 ಟನ್ ತೂಕವಿದೆ. ಈ ಗೋಪುರ ವೀಕ್ಷಣೆ ವರ್ಷಕ್ಕೆ ಸರಾಸರಿ 7 ಮಿಲಿಯನ್ ಪ್ರವಾಸಿಗರು ಆಗಮಿಸುತ್ತಾರೆ.