ವಾಷಿಂಗ್ಟನ್, ಜು 25 (DaijiworldNews/ AK): ದೇಶದ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ಹಾಗೂ ಹೊಸ ತಲೆಮಾರಿಗೆ ಅವಕಾಶ ನೀಡುವ ಸಲುವಾಗಿ ಅಧ್ಯಕ್ಷೀ ಯ ಚುನಾವಣೆಯಿಂದ ಹಿಂದೆ ಸರಿದಿದ್ದೇ ನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ತಮ್ಮ ಓವಲ್ ಕಚೇರಿಯಿಂದ ಬುಧವಾರ ರಾತ್ರಿ ದೇಶವನ್ನು ಉದ್ದೇಶಿಸಿ ಅವರು ಮಾತನಾಡಿ, ನಾನು ಈ ಕಚೇ ರಿಯನ್ನು ಗೌರವಿಸುತ್ತೇನೆ, ಅದಕ್ಕಿಂತಲೂ ಹೆಚ್ಚಾಗಿ ದೇಶವನ್ನು ಪ್ರೀ ತಿಸುತ್ತೇನೆ.ಹೊಸ ತಲೆಮಾರಿಗೆ ಅವಕಾಶವನ್ನು ಹಸ್ತಾಂತರಿಸುವುದು ಉತ್ತಮ ಎಂದು ನಾನು ನಿರ್ಧರಿಸಿದೆ. ದೇಶವನ್ನು ಒಟ್ಟುಗೂಡಿಸಲು ಇದು ಉತ್ತಮಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಬೈ ಡನ್, ಟ್ರಂಪ್ ಅವರ ಹೆಸರು ಉಲ್ಲೇ ಖಿಸಿದೇ, ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಅಮೆರಿಕನ್ನರು ಎದುರಿಸುವ ಅಪಾಯಗಳನ್ನು ಪಟ್ಟಿ ಮಾಡಿದರು.ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ಯಾವುದೂ ಅಡ್ಡಿಯಾಗುವುದಿಲ್ಲ. ಅದು ವೈಯಕ್ತಿಕ ಮಹತ್ವಾಕಾಂಕ್ಷೆಯನ್ನು ಒಳಗೊಂಡಿದೆ’ ಎಂ ದು ಟ್ರಂಪ್ ಕುರಿತು ಪರೋಕ್ಷವಾಗಿ ತಿರುಗೇಟು ನೀಡಿದರು.
ಭಾಷಣದಲ್ಲಿ ಕಮಲಾ ಹ್ಯಾರಿಸ್ರನ್ನು ಹೊಗಳಿದ ಬೈ ಡನ್, ಅವರು ಗಟ್ಟಿಗಿತ್ತಿ ಹಾಗೂ ಸಮರ್ಥ ವ್ಯಕ್ತಿ. ದೇ ಶವನ್ನು ಮುನ್ನಡೆಸುವಲ್ಲಿ ಅವರು ನನ್ನ ಅದ್ಭುತ
ಜೊತೆಗಾರ್ತಿ ಯಾಗಿದ್ದರು ಎಂ ದು ಶ್ಲಾಘಿಸಿದರು.2024ರ ನವೆಂಬರ್ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀ ಯ ಚುನಾವಣೆಯಿಂದ ಹಿಂದೆ ಸರಿದ ಬಳಿಕ ದೇಶವನ್ನುದ್ದೇಶಿಸಿ ಅವರು ಮಾಡಿದ ಮೊದಲ ಭಾಷಣ ಇದಾಗಿದೆ.