ಇಸ್ಲಾಮಾಬಾದ್,ಮೇ 16 (Daijiworld News/MSP): ಪಾಕಿಸ್ತಾನಕ್ಕೆ ಬಲವಾದ ಆರ್ಥಿಕ ಪೆಟ್ಟು ಬಿದ್ದಿದೆ. ಅಮೆರಿಕದ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ ಮತ್ತೆ ಕುಸಿದಿದ್ದು, ತೀವ್ರ ಆರ್ಥಿಕ ಸಂಕಷ್ಟದಲ್ಲಿರೋ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆದ ಬಿದ್ದಂತಾಗಿದೆ. ಬುಧವಾರ ಡಾಲರ್ ಎದುರು 141.5 ರೂಪಾಯಿದ್ದ ಪಾಕಿಸ್ತಾನ ಕರೆನ್ಸಿ ಮೌಲ್ಯ, ಗುರುವಾರದಂದು 6.50 ರೂಪಾಯಿಯಷ್ಟು ಇಳಿಕೆ ಕಂಡು 135 ತಲುಪಿದೆ. ಹೀಗಾಗಿ ಡಾಲರ್ ಮುಂದೆ ಪಾಕ್ ಕರೆನ್ಸಿ ಮೌಲ್ಯ ಪಾತಾಳಕ್ಕೆ ಕುಸಿದಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್, ಐಎಮ್ಎಫ್ ಮುಂದೆ ಆರ್ಥಿಕ ಸಹಾಯಕ್ಕಾಗಿ ಕೈಒಡ್ಡಿ ನಿಂತಿದ್ರೆ ಇತ್ತ ಕರೆನ್ಸಿ ಮೌಲ್ಯ ಕುಸಿದಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನ ಕರೆನ್ಸಿಯ ಮೌಲ್ಯ ಮತ್ತಷ್ಟು ಕ್ಷೀಣಿಸುವ ಸಾಧ್ಯತೆಗಳಿವೆ. ಪಾಕ್ ಭಾರತೀಯ 1 ರೂಪಾಯಿಗೆ ಪ್ರತಿಯಾಗಿ ದುಪ್ಪಟ್ಟು ಹಣ ಅಂದರೆ ಪಾಕಿಸ್ತಾನ ಕರೆನ್ಸಿ ಲೆಕ್ಕದಲ್ಲಿ 2 ರೂಪಾಯಿ 10 ಪೈಸೆ ನೀಡಬೇಕಾದ ಸ್ಥಿತಿ ಬಂದೊದಗಿದೆ.
ಐಎಮ್ಎಫ್ ಮುಂದೆ ಆರ್ಥಿಕ ಸಹಾಯಕ್ಕಾಗಿ ಕೈಒಡ್ಡಿದ ಹಿನ್ನಲೆಯಲ್ಲಿ ಕಠಿಣ ಸುಧಾರಣೆಯ ಷರತ್ತುಗಳನ್ನ ವಿಧಿಸಿ ಐಎಮ್ಎಫ್ ಪಾಕಿಸ್ತಾನಕ್ಕೆ 6 ಬಿಲಿಯನ್ ಡಾಲರ್ ಹಣಕಾಸು ಸಹಾಯ ಮಾಡಲು. ಒಪ್ಪಿಗೆ ನೀಡಿದೆ. ಆದರೂ ಪಾಕ್ ಕರೆನ್ಸಿ ಪಾತಾಳ ಕುಸಿತ ಕಂಡಿರುವ ಬಗ್ಗೆ ಪಾಕ್ ಜನರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.