ಕಾಠ್ಮಂಡು, ಜು.07(DaijiworldNews/AK): ಭಾರೀ ಮಳೆ ಹಿನ್ನೆಲೆ ನೇಪಾಳದಲ್ಲಿ ಗುಡ್ಡ ಕುಸಿತದ ಪರಿಣಾಮ ಮುಕ್ತಿನಾಥ ದೇವಾಲಯಕ್ಕೆ ತೆರಳಿದ್ದ ಕನ್ನಡಿಗ ಯಾತ್ರಾರ್ಥಿಗಳು ರಸ್ತೆ ಮಧ್ಯೆ ಸಿಲುಕಿಕೊಗೊಂಡ ಘಟನೆ ನಡೆದಿದೆ.
ಭಾರೀ ಮಳೆಗೆ ನೇಪಾಳದಲ್ಲಿ ಗುಡ್ಡ ಬಂಡೆಗಳು ಕುಸಿದಿವೆ. 50 ಮಂದಿ ಯಾತ್ರಾರ್ಥಿಗಳು ಎರಡು ದಿನದ ಹಿಂದೆ ಬೆಂಗಳೂರಿನಿಂದ ನೇಪಾಳದ ಮುಕ್ತಿನಾಥ ದೇವಾಲಯಕ್ಕೆ ತೆರಳಿದ್ದರು. ಗುಡ್ಡ ಕುಸಿದ ಪರಿಣಾಮ ನೇಪಾಳದ ಪ್ರೋಕ್ರಾದಿಂದ ಮುಕ್ತಿನಾಥ ದೇವಾಲಯ ರಸ್ತೆಯಲ್ಲಿ ಯಾತ್ರಾರ್ಥಿಗಳು ಸಿಲುಕಿದ್ದಾರೆ.
ಭಾರೀ ಮಳೆಗೆ ಗುಡ್ಡ ಕುಸಿದು ವಾಹನಗಳು ಪಲ್ಟಿಯಾಗಿವೆ. ಯಾತ್ರಾರ್ಥಿಗಳು 11 ದಿನಗಳ ಪ್ರವಾಸಕ್ಕೆಂದು ತೆರಳಿದ್ದರು. ಸದ್ಯ ಎಲ್ಲಾ ಕನ್ನಡಿಗರು ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ರಕ್ಷಣಾ ಪಡೆ ಎಲ್ಲಾ ಕನ್ನಡಿಗ ಯಾತ್ರಾರ್ಥಿಗಳನ್ನು ರಕ್ಷಣೆ ಮಾಡಿದೆ. ಸದ್ಯ ಎಲ್ಲಾ ಯಾತ್ರಾರ್ಥಿಗಳು ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ದೊರೆತಿದೆ.