ಅಸ್ತಾನ ಜು 04 (DaijiworldNews/ AK): ಭಾರತದ ವಿದೇ ಶಾಂಗ ಸಚಿವ ಎಸ್. ಜೈ ಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಕಜಕಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆಯ (ಎಸ್ಸಿಒ) ನಾಯಕರ ವಾರ್ಷಿಕ ಸಭೆಯ ವೇ ಳೆ ಈ ಭೇಟಿ ನಡೆದಿದೆ. ಈ ಕುರಿತು ಭಾರತೀಯ ವಿದೇಶಾಂ ಗ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
2020ರಿಂದ ಈಚೆಗೆ ಭಾರತ-ಚೀನಾ ಮಧ್ಯೆ ಪೂರ್ವ ಲಡಾಖ್ ಸೇರಿದಂತೆ ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್ಎಸಿ)ಯಲ್ಲಿ ಗಡಿ ವಿವಾದ ಉಲ್ಬಣಿಸಿದೆ. ಈ ಹಿನ್ನೆಲೆಯಲ್ಲಿಈ ಭೇಟಿ ಹೆಚ್ಚಿನ ಮಹತ್ವಗಿಟ್ಟಿಸಿಕೊಂಡಿದೆ.
ಅಸ್ತಾನದಲ್ಲಿರುವ ಮಹಾತ್ಮ ಗಾಂಧಿ ಅವರ ಪುತ್ಥಳಿಗೆ ವಿದೇಶಾಂ ಗ ಸಚಿವ ಎಸ್.ಜೈ ಶಂ ಕರ್ ಅವರು ಬುಧವಾರ ನಮನ ಸಲ್ಲಿಸಿದ್ದರು. ಅಲ್ಲದೆ ಹಲವು ಜಾಗತಿಕ ನಾಯಕರನ್ನು ಭೇ ಟಿಯಾಗಿ ಚರ್ಚೆ ನಡೆಸಿದ್ದರು.