ಕೊಲಂಬೊ, ಜೂ 20 (DaijiworldNews/ AK): ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ಅವರು ಇಂದು( ಗುರುವಾರ) ಶ್ರೀ ಲಂಕಾಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಉಭಯ ರಾಷ್ಟ್ರಗಳ ದ್ವಿಪಕ್ಷೀ ಯ ಸಂಬಂಧವನ್ನು ಬಲಪಡಿಸುವ ಸಲುವಾಗಿ ಮಾತುಕತೆ ನಡೆಸಲಿದ್ದಾರೆ.
ಶ್ರೀಲಂಕಾ ಭೇಟಿ ಸಂಬಂಧ ಎಕ್ಸ್ ನಲ್ಲಿ ಪೋ ಸ್ಟ್ ಹಂಚಿಕೊಂ ಡಿರುವ ಜೈ ಶಂಕರ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ಶ್ರೀ ಲಂಕಾಕ್ಕೆ ಇದೇ ಮೊದಲ ಭೇಟಿ’
ಎಂದು ಬರೆದುಕೊಂಡಿದ್ದಾರೆ.
ಕೊಲಂಬೊಗೆ ಆಗಮಿಸಿದ ಜೈ ಶಂಕರ್ ಅವರನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ತಾರಕ ಬಾಲಸೂರ್ಯ , ಪೂರ್ವ ಪ್ರಾಂತ್ಯದ ಗವರ್ನ ರ್ ಸೆಂಥಿಲ್ ಥೋಂಡಮಾನ್ ಅವರು ಬರಮಾಡಿಕೊಂಡರು.
ಉಭಯ ರಾಷ್ಟ್ರಗಳ ಸಂಪರ್ಕ ಯೋಜನೆಯನ್ನು ಬಲವರ್ಧನೆಗೊಳಿಸುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.ಜೈಶಂಕರ್ ಅವರ ಭೇಟಿ ಉಭಯರಾಷ್ಟ್ರಗಳ ದ್ವಿಪಕ್ಷೀ ಯ ಬಾಂಧವ್ಯದ ಪ್ರತೀಕವಾಗಿದೆ. ಭೇಟಿಯ ವೇ ಳೆ ಜೈ ಶಂ ಕರ್ ಅವರು ಹಲವು ವಿಚಾರಗಳ ಕುರಿತಂ ತೆ ಶ್ರೀ ಲಂಕಾದ ಉನ್ನತ ನಾಯಕರೊಂದಿಗೆ ಚರ್ಚಿಸಲಿದ್ದಾರೆ.