ಇಸ್ಲಾಮಾಬಾದ್, ಮೇ13(Daijiworld News/SS): 2008ರ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಮುಂದಾಳತ್ವದ ಜಮಾತ್ ಉದ್ ದಾವಾ ಹಾಗೂ ಫಲಾಹ್ ಇ ಇನ್ಸಾನಿಯತ್ ಫೌಂಡೇಷನ್ - ಎಫ್ ಐ ಎಫ್ ಸೇರಿದಂತೆ ಲಾಹೋರ್ ಮೂಲದ 11 ಉಗ್ರ ಸಂಘಟನೆಗಳನ್ನು ಪಾಕಿಸ್ತಾನ ನಿಷೇಧಿಸಿದೆ.
ಮೇ 1 ರಂದು ಪಾಕಿಸ್ತಾನ ಮೂಲದ ಜೈಷೆ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿತು. ಜಮಾತ್ ಉದ್ ದವಾ ಮತ್ತು ಅದರ ದತ್ತಿ ಶಾಖೆಯಾದ ಫಲಾಹ್ ಇನ್ಸಾನಿಯತ್ ಫೌಂಡೇಷನ್ ಅನ್ನು ಉಗ್ರ ಸಂಘಟನೆಯಾಗಿ ಘೋಷಿಸಬೇಕೆಂದು ಜಾಗತಿಕ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನ ಫೆಬ್ರವರಿಯಲ್ಲಿ ಈ ಎರಡು ಉಗ್ರ ಸಂಘಟನೆಗಳನ್ನು ನಿಷೇಧಿಸಿತ್ತು.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಒಳಾಡಳಿತ ಸಚಿವ ಇಜಾಝ್ ಶಾ ನಡುವೆ ನಡೆದ ಚರ್ಚೆಯ ವೇಳೆ 11 ಉಗ್ರ ಸಂಘಟನೆಗಳ ನಿಷೇಧದ ನಿರ್ಣಯವನ್ನು ಕೈಗೊಳ್ಳಲಾಯಿತು. ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಪ್ರಾಧಿಕಾರ - ನ್ಯಾಕ್ಟಾ ತನ್ನ ವೆಬ್ಸೈಟ್ನಲ್ಲಿ ಘೋಷಿಸಿದೆ.
.