ಲಂಡನ್, ಮೇ 10 (Daijiworld News/MSP): ಲಂಡನ್ ನಲ್ಲಿ ದುಷ್ಕರ್ಮಿಗಳು ಚಾಕು ಇರಿದು ಭಾರತ ಮೂಲದ ವ್ಯಕ್ತಿಯನ್ನು ಕೊಲೆ ಹತ್ಯೆ ಮಾಡಿದ್ದಾರೆ. ಹತ್ಯೆಯಾದವರನ್ನು ಸೂಪರ್ ಮಾರ್ಕೆಟ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಹೈದ್ರಾಬಾದ್ ಮೂಲದ ಮೊಹಮದ್ ನದೀಮುದ್ದೀನ್ ಎಂದು ಗುರುತಿಸಲಾಗಿದೆ.
ಲಂಡನ್ ಬರ್ಕ್ ಶೈರ್ ನ ವೆಲ್ಲಿಂಗ್ಟನ್ ಸ್ಟ್ರೀಟ್ ನಲ್ಲಿರುವ ಟೆಸ್ಕೋ ಪಾರ್ಕ್ ಸೂಪರ್ ಮಾರ್ಕೆಟ್ನಲ್ಲಿ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇವರನ್ನು ದುಷ್ಕರ್ಮಿಗಳು ಚಾಕು ಇರಿದು ಕೊಲೆಗೈದಿದ್ದಾರೆ.
ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ತೀವ್ರ ರಕ್ತಸ್ರಾವವಾಗಿ ಬಿದ್ದಿದ್ದ ಮೊಹಮದ್ ನದೀಮುದ್ದೀನ್ ಅವರನ್ನು ಸ್ಛಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ನದೀಮುದ್ದೀನ್ ಅವರ ಪತ್ನಿ ವೈದ್ಯಕೀಯ ಪದವಿ ಮುಗಿಸಿ ತಿಂಗಳ ಹಿಂದಷ್ಟೇ ಲಂಡನ್ಗೆ ತೆರಳಿದ್ದರು ಎಂದು ತಿಳಿದು ಬಂದಿದೆ.
ನದೀಮುದ್ದಿನ್ ಸಾವಿನ ವಿಚಾರ ಕೇಳಿ ಆಘಾತಕ್ಕೀಡಾಗಿರುವ ಕುಟುಂಬಸ್ಥರು ನೆರವಿಗಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದಾರೆ.
ಇನ್ನು ಕೊಲೆಯ ಬಗ್ಗೆ ಮಾಹಿತಿ ನಿಡಿರುವ ಸ್ಥಳೀಯ ಪೊಲೀಸ್ ಅಧಿಕಾರಿ ಲ್ಯಾನ್ ಹಂಟರ್ ಅವರು, ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸುತ್ತಿದ್ದು ಪ್ರಕರಣಕ್ಕೆ ತನಿಖಾ ಹಂತದಲ್ಲಿದೆ. ಶೀಘ್ರ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.