ವೆಟಿಕನ್ ನಗರ, ಮೇ 09 (Daijiworld News/MSP): ಪಾದ್ರಿಗಳು ಹಾಗೂ ಬಿಷಪ್ ಗಳು ಕ್ರೈಸ್ತ ಸನ್ಯಾಸಿನಿಯರ ಮೇಲೆ ಲೈಂಗಿಕ ಎಸಗುತ್ತಿರುವ ಪ್ರಕರಣ ಸಂಬಂಧಪಟ್ಟಂತೆ ಪೋಪ್ ಫ್ರಾನ್ಸಿಸ್ ಅವರು ಗುರುವಾರ ವಿಶ್ವಾದ್ಯಂತದ ಕ್ಯಾಥೋಲಿಕ್ ಚರ್ಚ್ ಗಳಿಗೆ ಅನ್ವಯವಾಗುವಂತೆ ಅಕ್ರಮ ಲೈಂಗಿಕ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವುದಕ್ಕೆ ಅವಕಾಶ ಕಲ್ಪಿಸಿ ನೂತನ ಕಾನೂನನ್ನು ಜಾರಿಗೊಳಿಸಿದ್ದಾರೆ.
ಪೋಪ್ ಅವರ ವೈಯಕ್ತಿಕ ಅಧಿಕಾರದ ನೆಲೆಯಲ್ಲಿ ಹೊರಡಿಸಲಾಗಿರುವ ಈ ಕಾನೂನು ದಾಖಲೆ ಪತ್ರದಲ್ಲಿ ಲೈಂಗಿಕ ಅಕ್ರಮಗಳ ಮಾಹಿತಿ ಇದ್ದರೆ ಅಥವಾ ಅಥವಾ ಅನುಮಾನ ಇದ್ದರೆ ಅದನ್ನು ತಕ್ಷಣ ಚರ್ಚಿಗೆ ತಿಳಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.