ವಿಶ್ವಸಂಸ್ಥೆ, ಮೇ 7(Daijiworld News/MSP): ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಿ ಎಂದು ಫ್ರಾನ್ಸ್ ದೃಢವಾಗಿ ಹೇಳಿಕೆ ನೀಡಿದೆ. ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆದುಕೊಂಡಿರುವ ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೂ ಖಾಯಂ ಸದಸ್ಯ ಸ್ಥಾನ ನೀಡಬೇಕಂದು ಒತ್ತಾಯ ಮಾಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳನ್ನು ತರುವ ಮತ್ತು ಅದನ್ನು ವಿಸ್ತರಿಸುವ ಅಗತ್ಯವಿದೆ ಎಂದು ಭಾರತ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದು ತಾನು ಖಾಯಂ ಸದಸ್ಯತ್ವ ಪಡೆಯುವುದಕ್ಕೆ ಅತ್ಯಂತ ಹೆಚ್ಚಿನ ಅರ್ಹತೆ ಹೊಂದಿದ್ದೇನೆ ಎಂದು ಪ್ರತಿಪಾದಿಸಿಕೊಂಡು ಬಂದಿದೆ. ಇದರೊಂದಿಗೆ ಬ್ರೆಜಿಲ್, ಜರ್ಮನಿ, ಜಪಾನ್ ಕೂಡಾ ತಮಗೂ ಸ್ಥಾನ ನೀಡಿ ಎಂದು ಒತ್ತಾಯಿಸಿದೆ.
ಜರ್ಮನಿ ಏಪ್ರಿಲ್ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲಿದೆ. ಭಾರತದಂತೆ ಜರ್ಮನಿ, ಬ್ರಝಿಲ್ ಮತ್ತು ಜಪಾನ್ ದೇಶಗಳಿಗೂ ವಿಶ್ವಸಂಸ್ಥೆಯ ವಿಸ್ತೃತ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಇರುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್ ರಾಯಭಾರಿಯಾಗಿರುವ ಫ್ರಾನ್ಸ್ವಾ ದೆಲಾತ್ರೆ ಅವರು ಹೇಳಿದ್ದಾರೆ.