ಅಂಕರಾ, ಮೇ.3(DaijiworldNews/AA): ಗಾಜಾದಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಟರ್ಕಿಯು ವಿರೋಧಿಸಿದೆ. ಹೀಗಾಗಿ ಇಸ್ರೇಲ್ ಜೊತೆಗಿನ ಆಮದು-ರಫ್ತನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾಗಿ ಟರ್ಕಿಯ ವ್ಯಾಪಾರ ಸಚಿವಾಲಯ ಮಾಹಿತಿ ನೀಡಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ವ್ಯಾಪಾರ ಸಚಿವಾಲಯ, ಇಸ್ರೇಲ್ ಜೊತೆಗಿದ್ದ ಆಮದು-ರಫ್ತು ಸಂಬಂಧವನ್ನು ಕಡಿತಗೊಳಿಸಲಾಗಿದೆ. ಇದು ಎಲ್ಲಾ ಉತ್ಪನ್ನಗಳಿಗೂ ಅನ್ವಯವಾಗಲಿದೆ. ಇಸ್ರೇಲ್ ವಿರುದ್ಧ ತೆಗೆದುಕೊಳ್ಳುತ್ತಿರುವ 2ನೇ ಕ್ರಮ ಇದು. ಗಾಜಾಗೆ ಮಾನವೀಯ ನೆರವು ಅನುಮತಿಸುವವರೆಗೂ ಇನ್ನಷ್ಟು ನಿರ್ಬಂಧಗಳು ಹೇರಲಿದ್ದೇವೆ ಎಂದು ತಿಳಿಸಿದೆ.
ಇನ್ನು ಕಳೆದ ತಿಂಗಳಷ್ಟೇ ಇಸ್ರೇಲ್ಗೆ ಅಲ್ಯಮಿನಿಯಂ, ಸ್ಟೀಲ್, ಕಟ್ಟಡ ಕಾಮಗಾರಿ ಸಂಬಂಧಿತ ಉತ್ಪನ್ನಗಳು ಸೇರಿ ಒಟ್ಟು 54 ಬಗೆಯ ಉತ್ಪನ್ನಗಳನ್ನು ರಫ್ತನ್ನು ಟರ್ಕಿಯು ಸ್ಥಗಿತಗೊಳಿಸಿತ್ತು.