ಕೋಲಂಬೊ,ಮೇ.06(DaijiworldNews/AZM): ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಹಿನ್ನಲೆ, ಭದ್ರತೆಯನ್ನು ಮತ್ತಷ್ಟು ಕಠಿಣಗೊಳಿಸಿರುವ ಶ್ರೀಲಂಕಾ ಸರಕಾರ 200 ಮುಸ್ಲಿಂ ಮೌಲ್ವಿಗಳು ಸೇರಿದಂತೆ ಒಟ್ಟು 600 ವಿದೇಶಿಗರನ್ನು ಹೊರಹಾರಲಾಗಿದೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಲಂಕಾ ಗೃಹ ಸಚಿವ ವಜ್ರ ಅಭ್ಯವರ್ಧನೆ, ಈ ಎಲ್ಲ ವಿದೇಶಿಗರು ಕಾನೂನಾತ್ಮಕವಾಗಿಯೇ ದೇಶಕ್ಕೆ ಬಂದಿದ್ದಾರೆ. ಆದರೆ ಭದ್ರತೆ ಹಾಗೂ ಅವರ ವೀಸಾ ಅವಧಿ ಮುಗಿದಿರುವ ಕಾರಣದಿಂದಾಗಿ ದಂಡ ವಿಧಿಸಿ ಅವರನ್ನು ದೇಶದಿಂದ ಹೊರಹಾಕಲಾಗಿದೆ. ವೀಸಾ ವ್ಯವಸ್ಥೆಯನ್ನು ಮತ್ತಷ್ಟು ಕಠಿಣಗೊಳಿಸಿದ್ದು ಧಾರ್ಮಿಕ ಶಿಕ್ಷಕರಿಗೆ ವೀಸಾ ನಿರ್ಬಂಧಿಸಲಾಗಿದೆ. ಹಾಗೂ ಹೊರಹಾಕಲ್ಪಟ್ಟ ಮೌಲ್ವಿಗಳು ಬಾಂಗ್ಲಾ, ಭಾರತ, ಮಾಲ್ಡೀವ್ಸ್ ಮತ್ತು ಪಾಕಿಸ್ತಾನ ದೇಶಕ್ಕೆ ಸೇರಿದವರಾಗಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.