ಮಾಸ್ಕೋ,ಮೇ6(DaijiworldNews/AZM):ಮಾಸ್ಕೋದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ವಿಮಾನ ತುರ್ತಾಗಿ ಇಳಿಯುತ್ತಿದ್ದ ವೇಳೆ ಬೆಂಕಿಗಾಹುತಿಯಾಗಿ 41 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಇಂದು ವರದಿಯಾಗಿದೆ.
ರಷ್ಯಾ ನಿರ್ಮಿತ ‘ಸೂಪರ್ ಜೆಟ್-100’ ವಿಮಾನ ಬೆಂಕಿಗಾಹುತಿಯಾಗಿದ್ದು, ದುರಂತದಲ್ಲಿ 41 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ರಷ್ಯಾದ ಷೆರೆಮೆಟ್ಯೆವೊ ನಿಲ್ದಾಣದಿಂದ ಮುರ್ಮನ್ಸ್ಕ್ ನಗರಕ್ಕೆ ಹೊರಟಿದ್ದ ವಿಮಾನಕ್ಕೆ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಪಾಯದ ಸುಳಿವು ಸಿಕ್ಕಿತ್ತು. ಹೀಗಾಗಿ ಮಾಸ್ಕೋದ ಬುಸಿಸ್ಟ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದಾಗ ಬೆಂಕಿ ಅವಘಡ ಸಂಭವಿಸಿದೆ.
ವಿಮಾನದಲ್ಲಿ ಸುಮಾರು 73 ಪ್ರಯಾಣಿಕರು ಪ್ರಯಾಣ ಬೆಳಸಿದ್ದು,. ಸದ್ಯ ಉಳಿದ ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ. ಹಾಗೂ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.