ಆಸ್ಟ್ರೇಲಿಯಾ, ಮೇ03(Daijiworld News/SS): ಮೂರು ಕಣ್ಣಿನ ವಿಚಿತ್ರ ರೀತಿಯ ಹಾವೊಂದು ಆಸ್ಟ್ರೇಲಿಯಾದ ಉತ್ತರ ಭಾಗದ ಹೆದ್ದಾರಿಯ ಮೇಲೆ ಪತ್ತೆಯಾಗಿದೆ.
ಅರ್ನ್ಹೆಮ್ ಹೆದ್ದಾರಿಯಲ್ಲಿ ಸಿಕ್ಕಿರುವ ಈ ಹಾವನ್ನು ಕಾರ್ಪೆಟ್ ಪೈತಾಪ್ ಎಂದು ಗುರುತಿಸಲಾಗಿದೆ.
ಈಗಾಗಲೇ ಈ ಮೂರು ಕಣ್ಣಿನ ಹಾವಿನ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ. ಮೂರು ಕಣ್ಣಿರುವ ಹಾವಿನ ಫೋಟೋಗಳನ್ನು ನಾರ್ಥನ್ ಟೆರಿಟರಿ ಪಾರ್ಕ್ಸ್ ಮತ್ತು ವೈಲ್ಡ್ ಲೈಫ್ ತನ್ನ ಫೇಸ್ ಬುಕ್ ಪೇಜಿನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಈ ಹಾವಿಗೆ ಎರಡು ತಲೆಯಿರಲಿಲ್ಲ. ಒಂದೇ ತಲೆಯಲ್ಲಿ ಮೂರು ಕಣ್ಣುಗಳಿತ್ತು. ಒಂದೇ ತಲೆಬುರುಡೆಯಲ್ಲಿ ಮೂರನೇ ಕಣ್ಣಿಗೆ ಜಾಗವಿತ್ತು. ಮೂರು ಕಣ್ಣುಗಳು ಕಾರ್ಯನಿರ್ವಹಿಸುತ್ತಿತ್ತು. ಆದರೆ ಬರೀ 3 ತಿಂಗಳಿನ ಈ ಹಾವು ಕಂಡುಹಿಡಿದ ಒಂದೇ ವಾರಕ್ಕೆ ಮೃತಪಟ್ಟಿದೆ. ಆಹಾರ ಸೇವಿಸಲು ಅದು ವಿಫಲವಾದ ಹಿನ್ನೆಲೆಯಲ್ಲಿ ಕಳೆದ ವಾರ ಮೃತಪಟ್ಟಿತು ಎಂದು ವರದಿಯಾಗಿದೆ.
ವನ್ಯಜೀವಿ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ರೀತಿ ವಿಲಕ್ಷಣವಾಗಿ ಜನ್ಮ ತಳೆಯುವ ಹಾವುಗಳು ಸಾಮಾನ್ಯ ಎಂದು ಹೇಳಿದ್ದಾರೆ.