ದುಬೈ,ಮೇ 02 (Daijiworld News/MSP): ಜದ್ದಾಫ್ ಪ್ರದೇಶದಲ್ಲಿ ತನ್ನ ಸ್ನೇಹಿತರೊಂದಿಗೆ ಸಮುದ್ರ ತೀರದಲ್ಲಿ ಮೀನು ಹಿಡಿಯುತ್ತಿದ್ದ ಭಾರತೀಯನೊಬ್ಬ ಆಯತಪ್ಪಿ ಸಮುದ್ರಕ್ಕೆ ಜಾರಿ ಬಿದ್ದು ಮುಳುಗಿ ಮೃತಪಟ್ಟಿರುವ ಘಟನೆ ಮೇ 1ರಂದು ವರದಿಯಾಗಿದೆ.
ಕೇರಳದ ಕೊಲ್ಲಂ ನ ಸಹಾದ್ ಅಬ್ದುಲ್ ಸಲಾಮ್ ಮೃತರು. ಇವರು ತನ್ನಸ್ನೇಹಿತರೊಂದಿಗೆ ಜದ್ದಾಫ್ ಜಿಲ್ಲೆಯ ಸಮುದ್ರ ತೀರಕ್ಕೆ ಹೋಗಿದ್ದರು. ಆಗ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯ ಖಲೀಜ್ ಟೈಮ್ಸ್ ವರದಿ ಮಾಡಿದೆ. ಮೃತಪಟ್ಟ ಸಹಾದ್ ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿ ಪಡೆದ ಪೋರ್ಟ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದಿದ್ದು ಬಳಿಕ ಕೋಸ್ಟ್ ಗಾರ್ಡ್ನ ಮುಳುಗು ತಜ್ಞರು ಶವವನ್ನು ಮೇಲಕ್ಕೆತ್ತಿದ್ದಾರೆ ಎಂದು ತಿಳಿದುಬಂದಿದೆ.