ಅಮೆರಿಕಾ, ಏ 05 (DaijiworldNews/AK): 50ವರ್ಷಗಳ ಹಿಂದೆ ಬಲ್ಗೇ ರಿಯಾ ಹಾಗೂ ಸರ್ಬಿಯಾದ ಗಡಿಭಾಗದ ನಿಶ್ ಪಟ್ಟಣದಲ್ಲಿದ್ದೆ. ಅಲ್ಲಿನ ರಸ್ತೆಗಳಲ್ಲಿ ಸಂಚರಿಸುವಾಗ ಅಪರಿಚಿತ ವಾಹನಗಳ ಸಹಾಯದಿಂದ ಪ್ರಯಾಣಿಸುತ್ತಿದ್ದೆ . ಆ ವೇ ಳೆ ಸತತ 120 ಗಂಟೆ ಕಾಲ ಹಸಿವಿನಿಂ ದ ಬಳಲಿದ್ದೇನೆ ಎಂದು ಹಳೆಯ ನೆನಪುಗಳನ್ನ ಇನ್ಫೊಸಿಸ್ನ ಸಹ ಸಂ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹಂಚಿಕೊಂಡಿದ್ದಾರೆ.
ಅಕ್ಷಯ ಪಾತ್ರ ಫೌಂಡೇ ಶನ್ ನಾಲ್ಕು ಶತಕೋಟಿ ಊಟಗಳನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಅಂಗವಾಗಿ ವಿಶ್ವಸಂಸ್ಥೆಯಲ್ಲಿರುವ ಭಾರತ ಕಾಯಂ ಸಮಿತಿಯಿಂದ ’ಆಹಾರ ಭದ್ರತೆಯಲ್ಲಿನ ಸಾಧನೆಗಳು: ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಭಾರತದ ದಾಪುಗಾಲು’ ವಿಷಯ ಕುರಿತು ಆಯೋಜಿಸಿದ ಕಾರ್ಯಕ್ರಮದಲ್ಲಿ ನಾರಾಯಣಮೂರ್ತಿ ಅವರುವ ಮಾತನಾಡಿ, ಬಹಳಷ್ಟು ಜನರಿಗೆ ಹಸಿವಿನ ನರಕದ ದರ್ಶನವಾಗಿಲ್ಲ. ಆದರೆ,ಯುರೋಪ್ನಲ್ಲಿ ಹಿಚ್ಹೈ ಕಿಂ ಗ್ಮಾಡುವಾಗ ನನಗೆ ಅದರ ಅನುಭವವಾಗಿದೆ ಎಂದರು.
ಇಲ್ಲಿರುವ ಭಾರತೀ ಯರು ಹಾಗೂ ನನಗೆ ಭಾರತ ಸರ್ಕಾ ರದಿಂ ದ ಉತ್ತಮ ಗುಣಮಟ್ಟದ ಶಿಕ್ಷಣ ಸಿಕ್ಕಿದೆ. ಹಾಗಾಗಿ, ದೇ ಶಕ್ಕೆ ನಾವು ಕೃತಜ್ಞತೆ ಸಲ್ಲಿಸಬೇಕಿದೆ. ಅನಾಥ, ಬಡಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ನಾವೆಲ್ಲರೂ ಸಹಾಯಹಸ್ತ ಚಾಚಬೇಕಿದೆ ಎಂದು ಸಲಹೆ ನೀಡಿದರು.ಅಶಕ್ತ ಸಮುದಾಯದ ಜನರ ಮೊಗದಲ್ಲಿ ನಗುಮೂಡಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ಕಾರ್ಯ ಶ್ಲಾಘನೀಯವಾದುದು ಎಂದರು.
ಸಮಾಜದ ಮೇ ಲೆ ಬಡಮಕ್ಕಳು ನಿರೀ ಕ್ಷೆ ಹಾಗೂ ನಂ ಬಿಕೆ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅವರು ನಂಬಿಕೆ ಕಳೆದುಕೊಂಡರೆ ಸಮಾಜದಲ್ಲಿ ಸಂಘರ್ಷ ಸೃಷ್ಟಿಸುತ್ತಾರೆ ಎಂದು ಹೇಳಿದರು.
ಅಕ್ಷಯ ಪಾತ್ರ ಒಳ್ಳೆಯ ಮಾದರಿಯಾಗಿದೆ. ಬಡಮಕ್ಕಳಲ್ಲಿ ವಿಶ್ವಾಸ, ನಂಬಿಕೆ ಮೂಡಿಸಲು ವಿಶ್ವದ ಇತರೆ ದೇ ಶಗಳು ಈ ಮಾದರಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂ ದು ಸಲಹೆ ನೀಡಿದರು.