ಕೊಲಂಬೋ, ಮೇ 1 (Daijiworld News/MSP): ಅಮೆರಿಕದ ಡ್ರೋಣ್ ದಾಳಿಯ ಪರಿಣಾಮ ಐಸಿಸ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್-ಬಾಗ್ದಾದಿ ಹತ್ಯೆಯಾಗಿದ್ದಾನೆ ಎಂಬ ನಂಬಿದವರಿಗೆ ಬಾಗ್ದಾದಿಯ ವಿಡಿಯೋ ಬಿಡುಗಡೆ ಬಳಿಕ ನಿಜಕ್ಕೂ ಅಘಾತವಾಗಿದೆ. 5 ವರ್ಷಗಳ ಬಳಿಕ ವಿಡಿಯೋವೊಂದರಲ್ಲಿ ಮತ್ತೆ ಪ್ರತ್ಯೇಕನಾದ ಬಾಗ್ದಾದಿ ,ಕೊಲಂಬೋದಲ್ಲಿ ನಡೆದ ಈಸ್ಟರ್ ಭಾನುವಾರದ ಭಯಾನಕ ದಾಳಿಗೆ ಐಸಿಸ್ ಕಾರಣ ಎಂದು ಘೋಷಿಸಿದ್ದಾನೆ. ಮತ್ತೆ ಏಷ್ಯಾ ಖಂಡದ ವಿವಿಧೆಡೆ ದಾಳಿ ನಡೆಸುವುದಾಗಿಯೂ ಆತನ ಗಂಭೀರ ಎಚ್ಚರಿಕೆ ನೀಡಿದ್ದಾರೆ.
"ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ಸರಣಿ ಬಾಂಬ್ ದಾಳಿಯು ಸಿರಿಯಾ ಯುದ್ಧದ ಪ್ರತೀಕಾರ. ನಮ್ಮ ದಾಳಿ ಇಲ್ಲಿಗೆ ಮುಕ್ತಾಯವಾಗಿದೆ. ಆದರೆ ಇದರ ಕ್ರೌರ್ಯ, ಭಯಾನಕತೆ ಇನ್ನೂ ಮುಂದುವರೆಯಲಿದೆ " ಎಂಬ ಎಚ್ಚರಿಕೆಯ ಸಂದೇಶವನ್ನು ಬಾಗ್ದಾದಿ ನೀಡಿದ್ದಾನೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಶ್ರೀಲಂಕಾದ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ ಭಯೋತ್ಪಾದಕ ಸಂಘಟನೆಯ ನಾಯಕ ಅಬು ಬಕ್ರ್ ಅಲ್-ಬಾಗ್ದಾದಿಯ ವಿಡಿಯೋ ಬೆದರಿಕೆ ನಂತರ ವಿಶ್ವವೇ ಜಾಗರೂಕರಾಗಿರಬೇಕು ಆತ ನಮ್ಮ ಹೋರಾಟ ನಿಂತಿಲ್ಲ. ಅದು ಸತತವಾಗಿ ಮುಂದುವರಿಯಲಿದೆ ಎಂದು ಹೇಳಿಕೊಂಡಿದ್ದಾನೆ ಹೀಗಾಗಿ ವಿಶ್ವದ ಪ್ರತಿ ದೇಶ ಕೂಡಾ ಎಚ್ಚರಿಕೆಯಿಂದ ಇದ್ದು ಭಯೋತ್ಪಾದನೆ ವಿರುದ್ದ ಸಮರ ಸಾರಬೇಕು ಎಂದಿದ್ದಾರೆ.
ಬಾಗ್ದಾದಿ ತನ್ನ ವೈಮಾನಿಕ ದಾಳಿ ಮತ್ತು ಡ್ರೋಣ್ ಆಕ್ರಮಣದಲ್ಲಿ ಮೃತಪಟ್ಟಿದ್ದಾನೆ ಎಂದು ಅಮೆರಿಕದ ಸೇನಾ ಪಡೆ ಮತ್ತು ರಕ್ಷಣಾ ಇಲಾಖೆ ಪೆಂಟಗನ್ ಹಲವು ಬಾರಿ ಹೇಳಿಕೊಂಡಿತ್ತು. ಆದರೆ ಇತ್ತೀಚೆಗೆ ಬಿಡುಗಡೆ ಮಾಡಿದ ಕಪ್ಪು ಮಿಶ್ರಿತ ಗಡ್ಡದೊಂದಿಗೆ ಎಂದಿನಂತೆ ತನ್ನ ಕೈಯಲ್ಲಿ ರೈಫಲ್ ಹಿಡಿದಿರುವ ಹೊಸ ವಿಡಿಯೋದಲ್ಲಿ ಬಾಗ್ದಾದಿ ಉತ್ತಮ ಆರೋಗ್ಯ ಹೊಂದಿರುವವನಂತೆ ಕಾಣಿಸುತ್ತಿದ್ದಾನೆ. ಇದರಲ್ಲಿ ಮಾತನಾಡಿರುವುದು ಬಾಗ್ದಾದಿಯೇ ಎಂದು ತಜ್ಞರ ತಂಡ ಖಚಿತ ಪಡಿಸಿದೆ.