ಮಾಸ್ಕೊ, 17(DaijiworldNews/ AK): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾನುವಾರ ನಡೆದಿದ್ದ ಚುನಾವಣೆಯಲ್ಲಿ 87.8% ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತಮ್ಮ ಅಧಿಕಾರವನ್ನು ಮತ್ತೆ ಪಡೆದಿದ್ದಾರೆ. ಮುಂದಿನ ಆರು ವರ್ಷಗಳ ಅವಧಿ ಆಡಳಿತ ನಡೆಸಲಿದ್ದಾರೆ.
ಚುನಾವಣೆ ವೇಳೆ ಪುಟಿನ್ ವಿರುದ್ಧ ಸಾವಿರಾರು ಜನ ಮತದಾನ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೆ ಪುಟಿನ್ ಬಹುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅವರು ರಷ್ಯಾ ಅಧ್ಯಕ್ಷರಾಗಿ 1999 ರಲ್ಲಿ ಅಧಿಕಾರಕ್ಕೆ ಏರಿದದ್ದರು. ಅಂದಿನಿಂದ ರಷ್ಯಾ ಮೇಲೆ ಅವರು ಹಿಡಿತ ಸಾಧಿಸಿದ್ದಾರೆ. ಪುಟಿನ್ ಪಡೆದ ಮತಗಳು, ರಷ್ಯಾದ ಸೋವಿಯತ್ ನಂತರದ ಇತಿಹಾಸದಲ್ಲಿ ಅತ್ಯಧಿಕ ಫಲಿತಾಂಶವಾಗಿದೆ ಎನ್ನಲಾಗಿದೆ.