ಕರಾಚಿ,ಏ 30 (Daijiworld News/MSP): ಸೌಹಾರ್ದತೆಯ ಸಂಕೇತವಾಗಿ ಪಾಕಿಸ್ತಾನವೂ ಪಾಕ್ ಜೈಲಿನಲ್ಲಿ ಬಂಧಿಯಾಗಿದ್ದ 60 ಭಾರತೀಯರನ್ನು ಬಿಡುಗಡೆ ಮಾಡಿದೆ. 55 ಭಾರತೀಯ ಮೀನುಗಾರರು ಹಾಗೂ 5 ನಾಗರಿಕರನ್ನು ಒಳಗೊಂಡಂತೆ ಒಟ್ಟು 60 ಭಾರತೀಯರನ್ನು ಸಾಂಕೇತಿಕವಾಗಿ ಸೋಮವಾರ ಬಿಡುಗಡೆಗೊಳಿಸಲಾಯಿತು.
ಬಿಡುಗಡೆಯಾದ ಮೀನುಗಾರನ್ನು ಮತ್ತು ನಾಗರಿಕರನ್ನು ಕರಾಚಿಯ ಮಾಲಿರ್ ಜೈಲಿನಿಂದ ಕರಾಚಿ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಕರೆ ತರಲಾಯಿತು. ಅನಂತರ, ಅವರನ್ನು ಬ್ಯುಸಿನೆಸ್ ಎಕ್ಸ್ಪ್ರೆಸ್ ರೈಲಿನಲ್ಲಿ ಲಾಹೋರ್ಗೆ ಕಳುಹಿಸಲಾಯಿತು. ಲಾಹೋರ್ಗೆ ಬಂದಿಳಿದ ಅವರನ್ನು ವಾಘಾಗೆ ಕರೆದೊಯ್ದು ಭಾರತೀಯ ಪಡೆಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಲಾಗಿದೆ.
ಎ. 7ರಂದು 100 ಮೀನುಗಾರರನ್ನು ಬಿಡುಗಡೆಗೊಳಿಸಿದ್ದ ಪಾಕಿಸ್ಥಾನ, ಎ. 14ರಂದು ಇತರ 100 ಮೀನುಗಾರರನ್ನು ಬಿಡುಗಡೆಗೊಳಿಸಿತ್ತು.