ಮಾಲೆ, ಫೆ 16 (DaijiworldNews/AA): ಮಾಲೀವ್ಸ್ ನಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಮಾಲ್ಡೀವ್ಸ್ ದಿವಾಳಿ ಎಂದು ಘೋಷಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಮಾಲ್ಡೀವ್ಸ್ ನಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಭಾರತ-ವಿರೋಧಿ ನಿಲುವು, ಭಾರತೀಯ ಸೇನೆಯನ್ನು ತೆಗೆದುಹಾಕುವ ಪ್ರಯತ್ನಗಳು ಮತ್ತು ಮಂತ್ರಿಗಳ ವಿವಾದಾತ್ಮಕ ಹೇಳಿಕೆಗಳು, ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವುದು ಕೂಡ ಕಾರಣವಾಗಿದೆ. ಮುಯಿಝು ಅವರ ‘ಇಂಡಿಯಾ ಔಟ್’ ಅಭಿಯಾನದಿಂದ ಉಲ್ಬಣಗೊಂಡ ವಿವಾದವು ಇದೀಗ ಅನಿರೀಕ್ಷಿತ ತಿರುವನ್ನು ಪಡೆದುಕೊಂಡಿದೆ.
ಇದೀಗ ಮಾಲ್ಡೀವ್ಸ್ ಸರ್ಕಾರವು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಬೇಲ್ ಔಟ್ ಸಾಲವನ್ನು ಕೋರಿದೆ. ಮುಯಿಝು ಅವರ ಉದ್ದೇಶಪೂರ್ವಕ ‘ಇಂಡಿಯಾ ಔಟ್’ ಅಭಿಯಾನದಿಂದಾಗಿ ಮಾಲ್ಡೀವ್ಸ್ ನ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.